ಬೆಂಗಳೂರು: ಯಶ್ ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕರಿಗೆ ನಟ ಯಶ್ ಕುಟುಂಬವು ಕಿರುಕುಳ ನೀಡಿದೆ ಅಂತಾ ಮನೆ ಮಾಲೀಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮನೆ ಮಾಲೀಕರು ಠಾಣೆಯಲ್ಲಿ ತಮಗಾದ ನೋವನ್ನ ಹೇಳಿಕೊಂಡಿದ್ದು, ಯಶ್ ತಾಯಿ ಪುಷ್ಪಾ ಬೆದರಿಕೆ ಹಾಕಿದ್ದಾರೆ . ಹಾಗೆ ಮನೆಯನ್ನ ಯೋಗ್ಯವಲ್ಲದ ರೀತಿಯಲ್ಲಿ ಹಾಳು ಮಾಡಿದ್ದಾರೆ. ಎಂತಹ ವ್ಯಕ್ತಿಗಳಿಗೆ ಮನೆ ಬಾಡಿಗೆ ಕೊಟ್ವೋ ಅನ್ನೋ ನೋವಿದೆ ಅಂತಾ ಪೊಲೀಸರ ಮುಂದೆ ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.
ಅಣ್ಣಾಮಲೈ, ಖಡಕ್ ಪೊಲೀಸ್ ಅಧಿಕಾರಿ ಮಾಲೀಕರ ಗೋಳು ಕೇಳಿದ ಮೇಲೆ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವುದಾಗಿ ಗಿರಿನಗರ ಪೊಲೀಸರು ಧೈರ್ಯ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮನೆ ಬಾಡಿಗೆ ಕೊಟ್ಟಾಗಿನಿಂದ ಕಿರಿಕ್ ಮೇಲೆ ಕಿರಿಕ್
ನಟ ಯಶ್ಗೆ ಮನೆ ಬಾಡಿಗೆ ಕೊಟ್ಟಿದ್ದ ಮಾಲೀಕರಾದ ಮುನಿ ಪ್ರಸಾದ್ ಹಾಗೂ ವನಜಾ ದಂಪತಿ ಹಲವು ವರ್ಷಗಳಿಂದ ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಇದರಿಂದ ಬಂದ ಹಣದಿಂದ ಮನೆ ಕಟ್ಟಿಸಿದ್ದಾರೆ. ಈ ಬಗ್ಗೆ ಗಿರಿನಗರ ಪೊಲೀಸರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಮಾಲೀಕರು, ಕಳೆದ 6 ವರ್ಷಗಳಿಂದ ಮನೆ ಬಾಡಿಗೆಗೆ ಸಂಬಂಧಿಸಿದಂತೆ ನೋವನ್ನ ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯ ಗಿರಿನಗರ ಠಾಣೆಯಲ್ಲಿ ಯಶ್ ವಿರುದ್ಧ ಎನ್‌ಸಿಆರ್ ಮಾಡಿಕೊಂಡ ಪೊಲೀಸರು, ಇಂದು ಎಫ್ಐಆರ್ ದಾಖಲಿಸಿ ಯಶ್ ತಾಯಿ ಪುಷ್ಪಾ ಹಾಗೂ ಇತರರ ಮೇಲೆ ತನಿಖೆ ಮುಂದುವರೆಸಲಾಗುವುದು ಎಂದು ದಕ್ಷಿಣಾ ವಿಭಾಗ ಪೊಲೀಸ್ ಅಧಿಕಾರಿ ಅಣ್ಣಾಮಲೈ ತಿಳಿಸಿದ್ದಾರೆ.