ಕರ್ನಾಟಕ

karnataka

ETV Bharat / state

ವಿನಾಯಿತಿ ಅವಧಿ ಮೀರಿದರೂ ಅನಗತ್ಯ ಓಡಾಟ: ಪೊಲೀಸರಿಂದ ಎಚ್ಚರಿಕೆ

ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದರೆ ಜನ ಅನಗತ್ಯ ಓಡಾಟ ನಡೆಸುತ್ತಿದ್ದು, ಈ ಬಗ್ಗೆ ಅಲರ್ಟ್ ಆಗಿರುವ ಬೆಂಗಳೂರು ಪೊಲೀಸರು ನಿಯಮ ಮೀರುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

police seized vehicle which violated Covid rules
ಅನಗತ್ಯ ಓಡಾಟದಲ್ಲಿ ತೊಡಗಿರುವ ಜನ

By

Published : May 9, 2021, 2:27 PM IST

ಬೆಂಗಳೂರು: ಕೋವಿಡ್ ಕರ್ಫ್ಯೂ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದರೆ, ಸಿಲಿಕಾನ್ ಸಿಟಿ ಮಂದಿ ಮಾತ್ರ ಅನಗತ್ಯವಾಗಿ ಓಡಾಡುತ್ತಿದ್ದಾರೆ.

ನಗರದ ಡಿಜೆ ಹಳ್ಳಿಯ ಮೋದಿ ರಸ್ತೆಯಲ್ಲಿ ಜನ ಮಕ್ಕಳ ಸಮೇತ ಬಟ್ಟೆ ಅಂಗಡಿಗೆ ಬಂದು ಶಾಪಿಂಗ್​ನಲ್ಲಿ ತೊಡಗಿರುವ ದೃಶ್ಯ ಕಂಡು ಬಂತು. ಕೋವಿಡ್ ನಿಯಮಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಎಲ್ಲರೂ ಒಂದೇ ಸಮನೆ ಖರೀದಿಯಲ್ಲಿ ತೊಡಗಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಅನಗತ್ಯ ಓಡಾಟದಲ್ಲಿ ತೊಡಗಿರುವ ಜನ

ಖಾಕಿ ಖಡಕ್ ಎಚ್ಚರಿಕೆ :ಕರ್ಫ್ಯೂ ಹಿನ್ನೆಲೆ ದಾಸರಹಳ್ಳಿ‌‌ ಸುತ್ತಮುತ್ತ ಏರಿಯಾಗಳಲ್ಲಿ ಪಶ್ಚಿಮ ವಿಭಾಗದ ಡಿಸಿಪಿ‌ ಸಂಜೀವ ಪಾಟೀಲ್ ರೌಂಡ್ಸ್ ತೆರಳಿ ಪರಿಶೀಲಿಸಿದರು‌. ಮುಖ್ಯರಸ್ತೆ, ಅಡ್ಡರಸ್ತೆ, ಒಳ ರಸ್ತೆಗಳು ಸೇರಿದಂತೆ ಯಾವುದೇ ರಸ್ತೆಗಳಲ್ಲೂ ಸುಖಾಸುಮ್ಮನೆ ತಿರುಗಾಡುವಂತಿಲ್ಲ ಎಂದು ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿದರು. ‌ಬೈಕ್​ನಲ್ಲಿ ಓಡಾಡುವುದು ಕಂಡು ಬಂದರೆ ಅಂತಹ ವಾಹನಗಳನ್ನು ಸೀಝ್​ ಮಾಡುವಂತೆ‌ ಸಿಬ್ಬಂದಿಗೆ ತಾಕೀತು ಮಾಡಿದರು.

ಕಾರು ಜಪ್ತಿ ಮಾಡದ ಪೊಲೀಸರು :ವಿನಾಯಿತಿ ಅವಧಿ‌ ಮೀರಿದರೂ ಸುಖಾ ಸುಮ್ಮನೆ ಓಡಾಡುತ್ತಿರುವ ಬೈಕ್ ಹಾಗೂ ಆಟೊಗಳನ್ನು ಮಾತ್ರ ಪೊಲೀಸರು ಸೀಝ್ ಮಾಡುತ್ತಿದ್ದಾರೆ. ಕಾರುಗಳನ್ನು ಜಪ್ತಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ABOUT THE AUTHOR

...view details