ಕರ್ನಾಟಕ

karnataka

By

Published : Nov 9, 2019, 8:38 AM IST

Updated : Nov 9, 2019, 8:52 AM IST

ETV Bharat / state

ಅಯೋಧ್ಯಾ ತೀರ್ಪು ಹಿನ್ನೆಲೆ : ಬಿಜೆಪಿ ಕಚೇರಿ ಸೇರಿ ಉತ್ತರ ವಿಭಾಗದಲ್ಲಿ ಖಾಕಿ ಕಣ್ಗಾವಲು

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಎಲ್ಲೆಡೆ ಬಿಗಿ ಪೊಲೀಸ್​ ಬಂದೋಬಸ್ತ್​ ಕಲ್ಪಿಸಲಾಗಿದೆ. ಬಿಜೆಪಿ ಕಚೇರಿ ಸೇರಿದಂತೆ ಉತ್ತರ ವಿಭಾಗದಲ್ಲಿ ‌ ಡಿಸಿಪಿ ಎನ್.ಶಶಿಕುಮಾರ್ ಅವರ ನೇತೃತ್ವದಲ್ಲಿ ಭದ್ರತೆ ವಹಿಸಲಾಗಿದೆ.

ಉತ್ತರ ವಿಭಾಗದಲ್ಲಿ ಖಾಕಿ ಕಣ್ಗಾವಲು

ಬೆಂಗಳೂರು : ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಎಲ್ಲೆಡೆ ಬಿಗಿ ಪೊಲೀಸ್​ ಬಂದೋಬಸ್ತ್​ ಕಲ್ಪಿಸಲಾಗಿದೆ. ಬಿಜೆಪಿ ಕಚೇರಿ ಸೇರಿದಂತೆ ಉತ್ತರ ವಿಭಾಗದಲ್ಲಿ ‌ ಡಿಸಿಪಿ ಎನ್.ಶಶಿಕುಮಾರ್ ಅವರ ನೇತೃತ್ವದಲ್ಲಿ ಭದ್ರತೆ ವಹಿಸಲಾಗಿದೆ.

ಈ ಕುರಿತು ಮಾತನಾಡಿದ ಡಿಸಿಪಿ ಶಶಿಕುಮಾರ್​, ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜನಸಂದಣಿ ಇರುವ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿದ್ದೇವೆ. ಉತ್ತರ ವಿಭಾಗದಲ್ಲಿ ಮೊದಲಿನಿಂದಲೂ ಸಾಮರಸ್ಯವಿದೆ. ಸುಮಾರು 80 ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಗಮನಹರಿಸಲು ಸೂಚಿಸಲಾಗಿದೆ. ಕೋಮು ಸಾಮರಸ್ಯ ಕದಡುವ ಪ್ರಯತ್ನಗಳನ್ನ ತಡೆಯಲು ಸಿದ್ಧವಾಗಿದ್ದೇವೆ. ಹಾಗೆ ಮೆಟ್ರೋ , ಬಸ್​ ನಿಲ್ದಾಣಗಳಲ್ಲೂ ಖಾಕಿ ಕಣ್ಗಾವಲು ಇದೆ. ಒಂದು ವೇಳೆ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ವಶಕ್ಕೆ ಪಡೆಯಲಿದ್ದೇವೆ. ನಮ್ಮ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಧಾನ ಕಚೇರಿ ಇರುವ ಹಿನ್ನೆಲೆ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಒಂದು ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಬ್ಯಾರಿಕೇಡ್​ಗಳನ್ನ ಹಾಕಿ ಭದ್ರತೆ ಒದಗಿಸಿದ್ದೇವೆ ಎಂದು ತಿಳಿಸಿದರು.

ಉತ್ತರ ವಿಭಾಗದಲ್ಲಿ ಖಾಕಿ ಕಣ್ಗಾವಲು

ಜಡ್ಜ್ ಕಾಲೋನಿಯಲ್ಲಿ ಬಿಗಿ ಭದ್ರತೆ :ಅಯೋಧ್ಯೆ ತೀರ್ಪು ನೀಡಲಿರುವ ಸುಪ್ರೀಂಕೋರ್ಟ್​ನ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ನ್ಯಾ.ಎಸ್.ಅಬ್ದುಲ್ ನಜೀರ್ ಅವರ ಸಹೋದರ ಮಹಮ್ಮದ್ ಅಖಿಲ್ ಮನೆ ಸುತ್ತಲೂ ಖಾಕಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಮಹಮ್ಮದ್ ಅಖಿಲ್ ಮನೆ ಸುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿಸಿಪಿ ಇಷಾ ಪಂತ್ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ. ಜಡ್ಜ್ ಕಾಲೋನಿಯಲ್ಲಿರುವ 180 ನ್ಯಾಯಮೂರ್ತಿಗಳ ಮನೆಗಳಿಗೆ ಬಿಗಿ ಭದ್ರತೆ ವಹಿಸಿದ್ದು, ಪ್ರತಿ ವಾಹನವನ್ನ ತಪಾಸಣೆ ನಡೆಸಿ ಕಾಲೋನಿ‌ ಒಳಗೆ ಬಿಡಲಾಗುತ್ತಿದೆ.

ರಾಮನಗರ‌ ಜಿಲ್ಲಾದ್ಯಂತ ಪೊಲೀಸ್ ಬಂದೋಬಸ್ತ್​ :ರಾಮನಗರ: ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ರೇಷ್ಮೆ ನಗರಿ ರಾಮನಗರ‌ ಜಿಲ್ಲಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 5 ಕೆಎಸ್​ಆರ್​ಪಿ ತುಕಡಿ ಸೇರಿದಂತೆ 6 ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರಾತ್ರಿಯಿಂದಲೇ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ‌ ಎಂದು ರಾಮನಗರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಎ. ಶೆಟ್ಟಿ ಮಾಹಿತಿ ನೀಡಿದರು.

Last Updated : Nov 9, 2019, 8:52 AM IST

ABOUT THE AUTHOR

...view details