ಬೆಂಗಳೂರು: ರಮಡಾ ರೆಸಾರ್ಟ್‌ನಲ್ಲಿ ಮಧ್ಯಪ್ರದೇಶದ 22 ಅತೃಪ್ತ ಶಾಸಕರು ವಾಸ್ತವ್ಯ ಹೂಡಿದ್ದು ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
4 ಕೆಎಸ್ಆರ್ಪಿ ತುಕಡಿ ಸೇರಿ 300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ನಾಗೇನಹಳ್ಳಿ ಗೇಟ್ ಬಳಿ ಹಾಗೂ ರಾಜಾನುಕುಂಟೆಯಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಪೊಲೀಸ್ ಬಂದೋಬಸ್ತ್ನಲ್ಲಿ ಮಧ್ಯಪ್ರದೇಶದ ಅತೃಪ್ತ ಶಾಸಕರು ಹೆಚ್ಚಿನ ಓದಿಗಾಗಿ : ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು ರಮಡಾ ರೆಸಾರ್ಟ್ಗೆ ಶಿಫ್ಟ್..
ಇನ್ನುಳಿದಂತೆ ಹೊನ್ನೇನಹಳ್ಳಿ ಗೇಟ್ನಿಂದ ರಮಡಾ ರೆಸಾರ್ಟ್ ಇರುವ ಮಾರ್ಗದಲ್ಲಿ ಯಾವುದೇ ಅಪರಿಚಿತ ವಾಹನಗಳು ಓಡಾಡದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಇನ್ನುಳಿದಂತೆ, ರೆಸಾರ್ಟ್‌ನಲ್ಲಿ ತಂಗಿರುವ ಶಾಸಕರು ಹೊರ ಬಂದಿಲ್ಲ. ಹೊರಗಿನ ಯಾವುದೇ ವಾಹನಗಳು ಸೇರಿದಂತೆ ಯಾರೊಬ್ಬರು ಒಳ ಪ್ರವೇಶಿಸಬೇಕಾದರೂ ರೆಸಾರ್ಟ್ ಮ್ಯಾನೇಜ್ಮೆಂಟ್ನ ಅನುಮತಿ ಜೊತೆಗೆ, ಸ್ಥಳೀಯ ಬಿಜೆಪಿ ಮುಖಂಡರ ಅನುಮತಿ ಪಡೆಯಬೇಕಿದೆ.