ಬೆಂಗಳೂರು: ದೇಶದ್ರೋಹ ಆರೋಪ ಪ್ರಕರಣದಡಿ ಈಗಾಲೇ ಇಬ್ಬರನ್ನು ಬಂಧಿಸಿರುವ ನಗರ ಪೊಲೀಸರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬಂಧಿತ ಆರೋಪಿಗಳಾದ ಅಮೂಲ್ಯಾ ಲಿಯೋನ್ ಹಾಗೂ ಆರ್ದ್ರಾ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ದೇಶದ್ರೋಹ ಆರೋಪ ಪ್ರಕರಣ: ಬಂಧಿತ ಯುವತಿಯರ ಹಿನ್ನೆಲೆ ಜಾಲಾಡುತ್ತಿರುವ ಪೊಲೀಸರು
ದೇಶದ್ರೋಹ ಆರೋಪ ಪ್ರಕರಣದಡಿ ಈಗಾಲೇ ಇಬ್ಬರನ್ನು ಬಂಧಿಸಿರುವ ನಗರ ಪೊಲೀಸರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬಂಧಿತ ಆರೋಪಿಗಳಾದ ಅಮೂಲ್ಯಾ ಲಿಯೋನ್ ಹಾಗೂ ಆರ್ದ್ರಾ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ನಗರ ಪೊಲಿಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆಯಂತೆ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹಾಗೂ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದ್ದು, ಆರೋಪಿಗಳ ಫೋನ್ ಕರೆಗಳ ಮಾಹಿತಿ ಕಲೆಹಾಕಿದ್ದಾರೆ. ಬಂಧಿತ ಇಬ್ಬರೂ ಆರೋಪಿಗಳ ಹಾವಭಾವ ಒಂದೇ ರೀತಿ ಇದೆ. ಹೀಗಾಗಿ ಆರೋಪಿಗಳು ತಂಗಿದ್ದ ಪಿಜಿ, ಕೆಲಸ ಮಾಡುತ್ತಿದ್ದ ಜಾಗ ಸೇರಿದಂತೆ ಪ್ರತಿಯೊಂದು ಮಾಹಿತಿಗಳನ್ನು ಪಡೆಯುತ್ತಿದ್ದಾರೆ.
ಸದ್ಯ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿಗಳ ಫೋನ್ ಕರೆ ಪರಿಶೀಲಿಸಿದ್ರೆ, ಅವರು ಯಾರ ಜೊತೆ ಸಂಪರ್ಕ ಹೊಂದಿದ್ರು, ಯಾರ ಜೊತೆ ಜಾಸ್ತಿ ಮಾತಾಡ್ತಿದ್ರು, ಏನೆಲ್ಲಾ ಪ್ಲಾನ್ ಮಾಡ್ತಿದ್ರು ಅನ್ನೋದ್ರ ಮಾಹಿತಿ ಸಿಗಲಿದೆ. ಹಾಗೆಯೇ ಒಂದು ವೇಳೆ ಆರೋಪಿಗಳ ಜೊತೆ ಸಂಪರ್ಕವಿರುವ ವ್ಯಕ್ತಿಗಳು ದೇಶದ್ರೋಹಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಮಾತಾಡಿದ್ದರೆ ಅಂತವರನ್ನು ವಶಕ್ಕೆ ಪಡೆಯಲು ಪೊಲೀಸರು ನಿರ್ಧಾರ ಮಾಡಿದ್ದಾರೆ.