ಕರ್ನಾಟಕ

karnataka

ETV Bharat / state

ಫೇಸ್​​​​​ಬುಕ್ ಪೇಜ್ ಅಡ್ಮಿನ್​​​ಗಾಗಿ ಪೊಲೀಸರ ಹುಡುಕಾಟ : ಅಷ್ಟಕ್ಕೂ ಆ ಪೋಸ್ಟ್​ನಲ್ಲಿ ಇರೋದೇನು? - kannada news

ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಫೇಸ್​​​​ಬುಕ್ ಪೇಜ್ ಅಡ್ಮಿನ್ ಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ.

ಕುಮಾರಸ್ವಾಮಿ

By

Published : May 30, 2019, 3:21 PM IST

Updated : May 30, 2019, 4:03 PM IST

ಬೆಂಗಳೂರು :ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳ ಕುರಿತು ಟ್ರೋಲ್ ಹಾವಳಿ ಹೆಚ್ಚಾಗಿದೆ. ದೇವೇಗೌಡರ ಕುಟುಂಬಸ್ಥರ ಮೇಲೆ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂಬ ಜೆಡಿಎಸ್ ಘಟಕ ಶ್ರೀರಾಂಪುರ ಕಾರ್ಯಕರ್ತರ ದೂರಿನನ್ವಯ ಟ್ರೋಲ್ ಮಗ ಪೇಜ್ ಅಡ್ಮಿನ್​​​ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಷ್ಟಕ್ಕೂ ಪೋಸ್ಟ್ ನಲ್ಲಿ ಏನಿದೆ ?

ದೇವೇಗೌಡರು 2014 ರಲ್ಲಿ ಮೋದಿ ಪ್ರಧಾನಿಯಾದ್ರೆ ದೇಶ ಬಿಡ್ತಿನಿ ಎಂದಿದ್ದರು, ಅದೇ ರೀತಿ 2018 ರಲ್ಲಿ ಬಹುಮತ ಸಿಗದಿದ್ದರೆ ನಾನು ರಾಜಕೀಯ ಬಿಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ರು, ಇನ್ನೂ ಲೋಕಸಭಾ ಚುನಾವಣಾ ಸಮಯದಲ್ಲಿ ಸಚಿವ ರೇವಣ್ಣ ಮೋದಿ ಪ್ರಧಾನಿಯಾದ್ರೆ ರಾಜಕೀಯ ನಿವೃತ್ತಿ ಹೊಂದುತ್ತೆನೆ ಎಂಬ ಮಾತು ಹೇಳಿದ್ರು ಈ ಕುರಿತಾಗಿ ಪ್ರಶ್ನಿಸಿ ಪೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್​​ ಹಾಕಲಾಗಿತ್ತು.

ಈ ವಿಚಾರವಾಗಿ ಜಯಂತ್ ಎಂಬಾತನನ್ನು ಶ್ರೀರಾಂಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ, ಟ್ರೋಲ್ ಮಗ ಆಡ್ಮೀನ್ ಇವರಲ್ಲ ಎಂಬುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಂಬಂಧ ಎಫ್ಐ ಆರ್ ದಾಖಲು ಮಾಡಿ ಅಡ್ಮಿನ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Last Updated : May 30, 2019, 4:03 PM IST

ABOUT THE AUTHOR

...view details