ಕರ್ನಾಟಕ

karnataka

ETV Bharat / state

ಪೊಲೀಸರಿಗೆ ಸರ್ಕಾರದಿಂದ ದೀಪಾವಳಿ ಉಡುಗೊರೆ: ವೇತನ ಪರಿಷ್ಕರಣೆ ಜೊತೆ ಕಷ್ಟ ಪರಿಹಾರ ಭತ್ಯೆ ಹೆಚ್ಚಳ - police salary hike by government news

ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರ ಔರಾದ್ಕರ್ ವರದಿಯಂತೆ ವೇತನ ಹೆಚ್ಚಳ ಮಾಡಿದ್ದು, ಜೊತೆಗೆ ಕಷ್ಟ ಪರಿಹಾರ ಭತ್ಯೆ ಹೆಚ್ಚಿಸಿದೆ.

ಪೊಲೀಸ್ ಸಿಬ್ಬಂದಿಗೆ ವೇತನ ಹೆಚ್ಚಳ

By

Published : Oct 19, 2019, 3:12 PM IST

Updated : Oct 19, 2019, 3:24 PM IST

ಬೆಂಗಳೂರು: ಪೊಲೀಸ್ ಹುತಾತ್ಮ ದಿನದ ಮುನ್ನಾ ದಿನ ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರ ಭರ್ಜರಿ ದೀಪಾವಳಿ ಉಡುಗೊರೆ ನೀಡಿದೆ. ವೇತನ ಪರಿಷ್ಕರಣೆ ಜೊತೆಗೆ ಕಷ್ಟ ಪರಿಹಾರ ಭತ್ಯೆ ಮೊತ್ತ ಹೆಚ್ಚಿಸಿದೆ.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಗಳ ವೇತನ ಶ್ರೇಣಿಯನ್ನು ರಾಘವೇಂದ್ರ ಔರಾದ್ಕರ್ ವರದಿಯಂತೆ ಜಾರಿ ಮಾಡಿದ್ದು, ಅದರ ಜೊತೆಗೆ ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಿಸಿ ತಕ್ಷಣ ಜಾರಿಗೆ ಬರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

2016ರ ಜುಲೈ 21 ರಾಘವೇಂದ್ರ ಔರಾದ್ಕರ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು, ಸಮಿತಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದ್ದು, 2019ರ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ವೇತನವನ್ನು ಪರಿಷ್ಕರಣೆ ಮಾಡಿದೆ. ರಾಜ್ಯ ಸರ್ಕಾರವು ರಾಘವೇಂದ್ರ ಔರಾದ್ಕರ್ ವರದಿಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನ ಶ್ರೇಣಿಗಳನ್ನು ಉನ್ನತಿಕರಣ ಮಾಡುವ ಎಲ್ಲಾ ಶಿಫಾರಸುಗಳನ್ನು ಅಂಗೀಕರಿಸಿರುತ್ತದೆ ಹಾಗೂ ಶಿಫಾರಸಿನಂತೆ ಸಂಪೂರ್ಣವಾಗಿ ವೇತನ ಶ್ರೇಣಿಗಳನ್ನು ಉನ್ನತೀಕರಣ ಮಾಡುವ ಮೂಲಕ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯ ಕ್ಷೇಮಕ್ಕೆ ಆದ್ಯತೆ ನೀಡಿರುತ್ತದೆ ಎಂದು ಆದೇಶ ಹೊರಡಿಸಲಾಗಿದೆ. ಸರ್ಕಾರ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ಕಳಕಳಿಯಿಂದ ಈಗಾಗಲೇ ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಸಿಬ್ಬಂದಿಗೆ ಈಗಿರುವ ಕಷ್ಟ ಪರಿಹಾರ ಭತ್ಯೆ ಜೊತೆಗೆ ಹೆಚ್ಚುವರಿಯಾಗಿ 1000 ರೂ.ಗಳನ್ನು ಮಂಜೂರು ಮಾಡಿದೆ.

ಪೊಲೀಸ್ ಸಿಬ್ಬಂದಿ ವೇತನ ಹೆಚ್ಚಳ

ಈ ಕಷ್ಟ ಪರಿಹಾರ ಭತ್ಯೆ ಹೆಚ್ಚಳದಿಂದ ಮಾನಸಿಕವಾಗಿ 10.70 ಕೋಟಿ ಹಾಗೂ ವಾರ್ಷಿಕ 128.38 ಕೋಟಿ ಹೆಚ್ಚುವರಿಯಾಗಿ ಸರ್ಕಾರ ಖರ್ಚು ಭರಿಸಬೇಕಾಗಿರುತ್ತದೆ. ಈ ವರದಿ ಜಾರಿಯಿಂದ ಹೊಸದಾಗಿ ಸೇರಿದ ಪೊಲೀಸ್ ಪೇದೆಗಳಿಗೆ ಇರುವ ಮಾಸಿಕ ವೇತನ ಒಟ್ಟು 30427 -(ಎಲ್ಲಾ ಭತ್ಯೆಗಳ ಸೇರಿ) ಬದಲಿಗೆ 34,267/-(ಎಲ್ಲಾ ಭತ್ಯೆಗಳು ಸೇರಿ) ರೂಪಾಯಿಗಳಾಗಿರುತ್ತದೆ. ಪೊಲೀಸ್ ಸಿಬ್ಬಂದಿ ಮುಂದಿನ ದಿನಗಳಲ್ಲಿ ಹೆಚ್ಚು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆಂದು ಆಶಿಸುತ್ತೇನೆ ಎಂದು ಸಿಎಂ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Last Updated : Oct 19, 2019, 3:24 PM IST

ABOUT THE AUTHOR

...view details