ಹೊಸಕೋಟೆ: ಕೆಲಸ ಕೊಡಿಸುವುದಾಗಿ ಹೊರ ರಾಜ್ಯದಿಂದ ಹುಡುಗಿಯರನ್ನ ಕರೆತಂದು ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಹೊಸಕೋಟೆ ಪೊಲೀಸರು ಬಲವಂತವಾಗಿ ವೇಶ್ಯವಾಟಿಕೆಯಲ್ಲಿ ಸಿಲುಕಿದ್ದ ಯುವತಿಯನ್ನು ರಕ್ಷಿಸಿದ್ದಾರೆ.
ಅಲಿಯಾ ತಾಜ್, ಅಂಬಿಕಾ, ಸೋಮಶೇಖರ್, ಪ್ರಸನ್ನ ಎಂಬುವವರು ಬಂಧನಕ್ಕೊಳಗಾಗಿದ್ದಾರೆ. ಇವರು ಹೊರರಾಜ್ಯಗಳಿಂದ ಕೆಲಸದ ಅಮಿಶ ಹೊಡ್ಡಿ ಯುವತಿಯರನ್ನ ಕರೆದುಕೊಂಡು ಬಂದು, ಅವರನ್ನು ಮನೆಯಲ್ಲಿಯೇ ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಹೊಸಕೋಟೆ ಪೊಲೀಸರು ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಹೊಸಕೋಟೆ ಟೌನಿನ ಬಸವೇಶ್ವರ ನಗರದ ಮನೆಯ ಮೇಲೆ ದಾಳಿ ನಡೆಸಿ ಕೃತ್ಯವನ್ನು ಬಯಲು ಮಾಡಿದ್ದಾರೆ.