ಕರ್ನಾಟಕ

karnataka

ETV Bharat / state

ಕಾಲೇಜಿನಲ್ಲಿ ಯುವತಿ ಕೊಲೆ ಪ್ರಕರಣ: ಪೊಲೀಸರು ಹೇಳಿದ್ದು ಹೀಗೆ..

ಬೆಂಗಳೂರಿನಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿತ - ಸ್ಥಳದಲ್ಲೇ ಸಾವನ್ನಪ್ಪಿದ್ದ ಯುವತಿ- ತಾನೂ ಚಾಕು ಇರಿದುಕೊಂಡ ವಿದ್ಯಾರ್ಥಿ

ಕಾಲೇಜಿನಲ್ಲಿ ಯುವತಿ ಕೊಲೆ ಪ್ರಕರಣ:
police reaction about college murder case in bengaluru

By

Published : Jan 4, 2023, 11:05 PM IST

ಕಾಲೇಜಿನಲ್ಲಿ ಯುವತಿ ಕೊಲೆ ಪ್ರಕರಣ ಸಂಬಂಧ ಪೊಲೀಸ್​ ಹೇಳಿಕೆ

ಬೆಂಗಳೂರು: ಪ್ರತಿಷ್ಠಿತ ಕಾಲೇಜಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನ ಬರ್ಬರವಾಗಿ ಕೊಲೆ ಮಾಡಿದ್ದಲ್ಲದೇ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತ ನೀಡಿದ್ದಾರೆ.

ಯಲಹಂಕ ರಾಜನಕುಂಟೆ ಬಳಿಯ ಕಾಲೇಜಿನಲ್ಲಿ ಕಳೆದ ಎರಡು ದಿನದ ಹಿಂದೆ ಕೋಲಾರ ಮುಳುಬಾಗಿಲು ಮೂಲದ 19 ವರ್ಷದ ಯುವತಿ ಮೇಲೆ ಪವನ್ ಕಲ್ಯಾಣ್ ಎಂಬ ಯುವಕ ಬರ್ಬರವಾಗಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಇದೀಗ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಪೊಲೀಸರು ತನಿಖೆಯ ಜಾಡು ಹಿಡಿದಿದ್ದಾರೆ. ಯುವತಿ ಕೊಲೆ ಆರೋಪಿ ಪವನ್ ವಿರುದ್ದ ಎಫ್​ಐಆರ್ ದಾಖಲಾಗಿದೆ.

ಎಸ್​ಪಿ ಹೇಳಿದ್ದೇನು?: ಆರೋಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಆದ್ರೆ ಆರೋಪಿ ಮಾತನಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದೇವೆ. ಅವರಿಬ್ಬರು ಬೇರೆ-ಬೇರೆ ಕಾಲೇಜಿನಲ್ಲಿ ಓದುತ್ತಿರುವುದರಿಂದ ಇವರಿಬ್ಬರ ಬಗ್ಗೆ ಸಹಪಾಠಿಗಳಿಗೂ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ನಾವು ಬೇರೆ-ಬೇರೆ ವಿಧಾನಗಳಿಂದ ಈ ಕೊಲೆಯ ಕಾರಣ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.

ಆರೋಪಿ ಯುವತಿಯ ಸಂಬಂಧಿಕನಾಗಿದ್ದು, ಯುವತಿ ಜೊತೆ ಓಡಾಡದಂತೆ ಪೋಷಕರು ವಾರ್ನ್ ಸಹ ಮಾಡಿದ್ದರಂತೆ. ಆದ್ರೂ ಯುವತಿ ಹಿಂದೆ ಆರೋಪಿ ಪವನ್ ಓಡಾಡ್ತಿದ್ದ ಎಂದು ಯುವತಿ ಪೋಷಕರು ಆರೋಪ ಮಾಡಿದ್ದಾರೆ. ಅಷ್ಟರಲ್ಲೇ ಈ ಘಟನೆ ನಡೆದಿದೆ. ಹೆಚ್ಚಿನ ತನಿಖೆ ಕೈಗೊಂಡಿದ್ದೇವೆ ಎಂದು ಎಸ್ಪಿ ಬೆಂಗಳೂರು ಗ್ರಾಮಾಂತರ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಸಂಬಂಧಿಕರ ಆರೋಪವೇನು?: ಆರೋಪಿ ಪವನ್ ಬೇರೆ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದು, ಕಾಲೇಜಿನಲ್ಲಿ ಚಾಕುವನ್ನ ಹಿಡಿದು ಹೇಗೆ ಒಳಗೆ ಬಿಟ್ರು.!?. ಇನ್ನೂ ಕಾಲೇಜಿನಲ್ಲಿ‌ ಸೆಕ್ಯೂರಿಟಿ ವೈಪಲ್ಯದಿಂದ ಈ ಕೊಲೆ ನಡೆದಿದೆ ಎಂದು ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.

ಮಂಗಳವಾರ ಮಧ್ಯಾಹ್ನ ಕಾಲೇಜಿನಲ್ಲಿದ್ದ ಎಂಟೆಕ್​ ವಿದ್ಯಾರ್ಥಿನಿ ಬಳಿ ಪಾಗಲ್​ ಪ್ರೇಮಿ ಏಕಾಏಕಿ ಚಾಕುವಿನಿಂದ ಭೀಕರವಾಗಿ ಇರಿದಿದ್ದ. ಅಲ್ಲದೆ, ತಾನೂ ಸಹ ಇರಿದುಕೊಂಡಿದ್ದ. ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಯುವತಿಯನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆ ಕೊನೆಯುಸಿರೆಳೆದಿದ್ದಳು. ಆರೋಪಿ ಯುವಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:ಕಾಲೇಜಿನಲ್ಲಿ ಎಂ ಟೆಕ್​ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ.. ಬೆಚ್ಚಿಬಿದ್ದ ಬೆಂಗಳೂರು

ABOUT THE AUTHOR

...view details