ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಇಸ್ಟೀಟ್ ಜೂಜು ಅಡ್ಡೆ ಮೇಲೆ ದಾಳಿ; 150ಕ್ಕೂ ಹೆಚ್ಚು ಜೂಜುಕೋರರು ಪೊಲೀಸ್ ವಶಕ್ಕೆ

ಇಸ್ಟೀಟ್ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 150ಕ್ಕೂ ಹೆಚ್ಚು ಜೂಜುಕೋರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Police raid on gambling den
ಇಸ್ಟೀಟ್ ಜೂಜು ಅಡ್ಡೆ ಮೇಲೆ ದಾಳಿ: 150ಕ್ಕೂ ಹೆಚ್ಚು ಜೂಜುಕೋರರ ಪೊಲೀಸ್ ವಶಕ್ಕೆ

By ETV Bharat Karnataka Team

Published : Nov 11, 2023, 9:22 AM IST

Updated : Nov 11, 2023, 1:05 PM IST

ಬೆಂಗಳೂರು:ಅಕ್ರಮವಾಗಿ ನಡೆಯುತ್ತಿದ್ದ ಇಸ್ಟೀಟ್ ಅಡ್ಡೆ ಮೇಲೆ ಏಕಾಏಕಿ ದಾಳಿ ನಡೆಸಿದ ನಗರ ಪಶ್ಚಿಮ ವಿಭಾಗದ‌ ಪೊಲೀಸರು 150ಕ್ಕೂ ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೂಜಾಟಕ್ಕಿಟ್ಟಿದ್ದ 7 ಲಕ್ಷ ಹಣ ಜಪ್ತಿ ಮಾಡಿದ್ದಾರೆ.

ಬಸವೇಶ್ವರ ನಗರದಲ್ಲಿರುವ ಅಡಿಗ ರಮ್ಮಿ‌ ಕ್ಲಬ್​ನಲ್ಲಿ ಅಕ್ರಮ ಚಟುವಟಿಕೆ ಕುರಿತು ಖಚಿತ ಮಾಹಿತಿ ಮೇರೆಗೆ ಬಸವೇಶ್ವರ ನಗರ ಹಾಗೂ ಗೋವಿಂದರಾಜ ನಗರ ಪೊಲೀಸರು ದಾಳಿ ನಡೆಸಿದ್ದಾರೆ‌.‌ ಕ್ಲಬ್​ನಲ್ಲಿ‌ 150ಕ್ಕೂ ಹೆಚ್ಚು ಮಂದಿ ಇಸ್ಟೀಟ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ದಾಳಿ ಲಕ್ಷಾಂತರ ರೂಪಾಯಿ ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಶೋಕ್ ಅಡಿಗ ಎಂಬುವರಿಗೆ ಸೇರಿದ ಕ್ಲಬ್ ಇದಾಗಿದೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಪ್ರಕರಣ- ಪಬ್​ಗಳ ಮೇಲೆ ನಡೆದಿತ್ತು ಸಿಸಿಬಿ ದಾಳಿ:ಸಿಲಿಕಾನ್ ಸಿಟಿ ಬೆಂಗಳೂರಿನ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಹುಕ್ಕಾ ಬಾರ್​ಗಳ ಮೇಲೆ ಇತ್ತೀಚೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದರು. ಕೋರಮಂಗಲ, ಇಂದಿರಾ ನಗರ, ಬಾಣಸವಾಡಿ, ಹೆಚ್ಎಸ್ಆರ್ ಲೇಔಟ್, ಹೆಣ್ಣೂರು ಸೇರಿದಂತೆ ನಗರದ ಹಲವು ಕಡೆ ದಾಳಿ ಮಾಡಲಾಗಿತ್ತು. 4 ಕಡೆಗಳಲ್ಲಿ ಪಬ್ ಮಾಲೀಕರ ವಿರುದ್ಧ ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಕಾಯ್ದೆ, ಅಬಕಾರಿ ನಿಯಮಗಳ ಹಾಗೂ ಬಾಲ ನ್ಯಾಯ ಕಾಯ್ದೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಇತ್ತೀಚೆಗೆ ತಿಳಿಸಿದ್ದರು.

ಇದನ್ನೂ ಓದಿ:ಬೆಂಗಳೂರು: ನಕಲಿ ವಿದೇಶಿ ಕರೆನ್ಸಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿ ಕಿಡ್ನಾಪ್​, ಮುಂದಾಗಿದ್ದೇನು?

Last Updated : Nov 11, 2023, 1:05 PM IST

ABOUT THE AUTHOR

...view details