ಕರ್ನಾಟಕ

karnataka

ನಿಯಮಗಳನ್ನು ಮೀರಿ ಪಟಾಕಿ ಮಾರಾಟ ಮಾಡುವ ಸ್ಟಾಲ್​ಗಳನ್ನು ಪರಿಶೀಲಿಸಲು ಆದೇಶ

By

Published : Nov 14, 2020, 12:33 PM IST

ನೀರಿ ಸಂಸ್ಥೆ ಅಧ್ಯಯನದಲ್ಲಿ ಅಭಿವೃದ್ಧಿ ಪಡಿಸಿರುವ ಪಟಾಕಿ ಗ್ರೀನ್ ಪಟಾಕಿ. ಈ ಪಟಾಕಿ ಮೇಲೆ ಕೇಂದ್ರ ಸರ್ಕಾರದ ಸಿಎಸ್ಐಆರ್ ಮಾರ್ಕ್ ಇರಬೇಕು. ಜೊತೆಗೆ ಪಟಾಕಿ ಸಂಸ್ಥೆಯ ಕ್ಯೂಆರ್ ಕೋಡ್ ಇರುತ್ತದೆ..

Police raid on firecracker stalls, Police raid on firecracker stalls in Bangalore, Bangalore police, Bangalore police news, ಪಟಾಕಿ ಅಂಗಡಿಗಳ ಮೇಲೆ ಪೊಲೀಸರು ದಾಳಿ, ಬೆಂಗಳೂರಿನಲ್ಲಿ  ಪಟಾಕಿ ಅಂಗಡಿಗಳ ಮೇಲೆ ಪೊಲೀಸರು ದಾಳಿ, ಬೆಂಗಳೂರು ಪೊಲೀಸ್​, ಬೆಂಗಳೂರು ಪೊಲೀಸ್​ ಸುದ್ದಿ,
ಪಟಾಕಿ ಮಾರಾಟ ಮಾಡುವ ಸ್ಟಾಲ್​ಗಳನ್ನು ಪರಿಶೀಲಿಸಲು ಆದೇಶ

ಬೆಂಗಳೂರು :ಬೆಳಕಿನ ದೀಪಾವಳಿ ಹಬ್ಬವನ್ನಸದ್ಯ ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಆದರೆ, ಕೊರೊನಾ ಇರುವ ಕಾರಣ ಸದ್ಯ ಎಲ್ಲೆಡೆ ಪಟಾಕಿ ಸಿಡಿಸುವ ಬದಲು ಹಸಿರು ಪಟಾಕಿ ಸಿಡಿಸುವಂತೆ ಸರ್ಕಾರದಿಂದ ಸೂಚಿಸಲಾಗಿದೆ. ನಿಯಮಗಳನ್ನು ಮೀರಿ ಪಟಾಕಿ ಮಾರಾಟ ಮಾಡುವ ಸ್ಟಾಲ್​ಗಳ ಮೇಲೆ ಪರಿಶೀಲನೆ ಮಾಡುವಂತೆ ನಗರ ಪೊಲೀಸ್ ಆಯುಕ್ತರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಪಟಾಕಿ ಮಾರಾಟ ಮಾಡುವ ಸ್ಟಾಲ್​ಗಳನ್ನು ಪರಿಶೀಲಿಸಲು ಆದೇಶ

ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೂಚನೆ ಮೆರೆಗೆ ನಗರದ ಎಲ್ಲಾ ಡಿಸಿಪಿಗಳು ಆಯಾ ಸ್ಟೇಷನ್ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ನಿಯಮದಂತೆ ಎರಡು ಲೋಗೊ ಆಧಾರದ ಮೇಲೆ ಚೆಕ್ ಮಾಡಲಾಗುತ್ತದೆ.

ಹಸಿರು ಪಟಾಕಿ ಪರಿಗಣಿಸುವುದು ಹೇಗೆ?:ನೀರಿ ಸಂಸ್ಥೆ ಅಧ್ಯಯನದಲ್ಲಿ ಅಭಿವೃದ್ಧಿ ಪಡಿಸಿರುವ ಪಟಾಕಿ ಗ್ರೀನ್ ಪಟಾಕಿ. ಈ ಪಟಾಕಿ ಮೇಲೆ ಕೇಂದ್ರ ಸರ್ಕಾರದ ಸಿಎಸ್ಐಆರ್ ಮಾರ್ಕ್ ಇರಬೇಕು. ಜೊತೆಗೆ ಪಟಾಕಿ ಸಂಸ್ಥೆಯ ಕ್ಯೂಆರ್ ಕೋಡ್ ಇರುತ್ತದೆ. ಇದು ಇದ್ರೆ ಮಾತ್ರ ಪಟಾಕಿ ಮಾರಾಟ ಮಾಡಬಹುದು.

ಈ ಹಿನ್ನೆಲೆ ನಗರದ ಹಲವೆಡೆ ಇವತ್ತಿನಿಂದ ಪೊಲೀಸ್ ಪಟಾಕಿ ರೇಡ್ ಪ್ರಾರಂಭವಾಗಲಿದೆ. ಪಟಾಕಿ ಕೊಳ್ಳುವ ಗ್ರಾಹಕರು ನಿಯಮದಂತೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ABOUT THE AUTHOR

...view details