ಕರ್ನಾಟಕ

karnataka

ETV Bharat / state

ಸಿಗರೇಟ್ ಅಂಗಡಿಗಳ ಮೇಲೆ ದಾಳಿ: ಪಶ್ಚಿಮ ವಿಭಾಗದ ಪೊಲೀಸರಿಂದ 17 ಎಫ್ಐಆರ್ ದಾಖಲು. - police officials raid on cigaratte shops

ಇಂದು (ಸೋಮವಾರ) ಶಾಲೆ ಆರಂಭವಾಗಿದ್ದರಿಂದ ಪಶ್ಚಿಮ ವಿಭಾಗದಲ್ಲಿರುವ ಶಾಲೆಗಳ ಸಮೀಪದ ಅಂಗಡಿಗಳಿಗೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು.

police-raid-on-cigarette-shop
ಸಿಗರೇಟ್ ಅಂಗಡಿಗಳ ಮೇಲೆ ದಾಳಿ

By

Published : Oct 25, 2021, 10:57 PM IST

ಬೆಂಗಳೂರು: ಶಾಲಾ ಆವರಣದ 100 ಮೀಟರ್ ಆಸು ಪಾಸಿನಲ್ಲಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ನಗರದ ಪಶ್ಚಿಮ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಹಾಗೆಯೇ, 17 ಎಫ್ಐಆರ್ ದಾಖಲಿಸಿಕೊಂಡು 52,750 ರೂ. ದಂಡ ವಸೂಲಿ ಮಾಡಿದ್ದಾರೆ.

ಸಿಗರೇಟ್ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಇಂದು ಶಾಲೆ ಆರಂಭವಾಗಿದ್ದರಿಂದ ಪಶ್ಚಿಮ ವಿಭಾಗದಲ್ಲಿರುವ ಶಾಲೆಗಳ ಸಮೀಪದ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಆ ವೇಳೆ, ಸಿಗರೇಟ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಚಾಮರಾಜಪೇಟೆಯ 10, ಉಪ್ಪಾರ್‌ಪೇಟೆ 35, ಕಲಾಸಿಪಾಳ್ಯ 15, ಆರ್.ಆರ್‌ನಗರ 59, ಕೆಂಗೇರಿ 25, ಜ್ಞಾನಭಾರತಿ ಠಾಣಾ ವ್ಯಾಪ್ತಿಯ 20 ಸೇರಿ ಒಟ್ಟು 304 ಪ್ರಕರಣ ದಾಖಲಿಸಿ ಸ್ಥಳದಲ್ಲಿಯೇ ದಂಡ ವಿಧಿಸಿದರು.

ಎಫ್​ಐಆರ್​ ದಾಖಲು

ಓದಿ:ತುಮಕೂರಲ್ಲಿ ದೇವೇಗೌಡರನ್ನು ಸೋಲಿಸಲು ಕಾಂಗ್ರೆಸ್ ಜೊತೆ ಚಿತಾವಣೆ ಮಾಡಿದ್ದೇ ಶಾಸಕ ಶ್ರೀನಿವಾಸ್: ಹೆಚ್​ಡಿಕೆ

ABOUT THE AUTHOR

...view details