ಬೆಂಗಳೂರು:ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಣೆ ಮಾಡ್ತಿರುವ ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವ ಕಾರಣ ಸದ್ಯ ಪೊಲೀಸರಲ್ಲಿ ಆತಂಕ ಶುರುವಾಗಿದೆ.
ಕೊರೊನಾ ಬಂದ ಸಂದರ್ಭದಲ್ಲಿ ಪೊಲೀಸರು ಎಲ್ಲ ಕಂಟೇನ್ಮೆಂಟ್ ಝೋನ್ಗಳಲ್ಲಿ, ಕೊರೊನಾ ಸೋಂಕಿತರು ಇರುವ ಪ್ರದೇಶಗಳಿಗೆ ತೆರಳಿ ಭದ್ರತೆ ವಹಿಸುತ್ತಾ ಇದ್ದರು. ಆದರೆ, ಸುಮಾರು 69ಕ್ಕೂ ಹೆಚ್ಚು ಪೊಲೀಸರಲ್ಲಿ ಕೊರೊನಾ ಸೋಂಕು ಪ್ರಕರಣ ಪತ್ತೆಯಾದ ಕಾರಣ ಸದ್ಯ ಪೊಲೀಸ್ ಕ್ವಾಟರ್ಸ್ಗಳಲ್ಲಿ ಒಬ್ಬರೇ ಇರಲು ನಿರ್ಧಾರ ಮಾಡಿದ್ದಾರೆ.
ನಗರದ ಬಹುತೇಕ ಕಡೆ ಪೊಲೀಸ್ ಕ್ವಾಟರ್ಸ್ಗಳಿದ್ದು, ಕುಟುಂಬಸ್ಥರ ಜೊತೆ ಪೊಲೀಸರು ವಾಸ ಮಾಡ್ತಾರೆ. ಆದರೆ ಗಲ್ಲಿ ಗಲ್ಲಿಗಳಲ್ಲಿ ಓಡಾಡುವ ಇವರೆಲ್ಲ ತಮಗೆ ಕೊರೊನಾ ಬಂದ್ರು ಪರವಾಗಿಲ್ಲ, ಕುಟುಂಬದ ಸುರಕ್ಷತೆ ದೃಷ್ಟಿಯಿಂದ ಕ್ವಾಟರ್ಸ್ಗಳಲ್ಲಿ ಒಬ್ಬರೇ ಇರಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ನಗರದ ಶೇ.60 ರಷ್ಟು ಪೊಲೀಸರ ಕುಟುಂಬಸ್ಥರು ಊರಿಗೆ ತೆರಳಿದ್ದಾರೆ. ಊಟ, ತಿಂಡಿಗೆ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ ಒಬ್ಬರೆ ಇರ್ತೇವೆ ಎಂದು ಹಿರಿಯಾಧಿಕಾರಿಗಳಿಗೆ ತಿಳಿಸಿದ್ದಾರೆ.