ಕರ್ನಾಟಕ

karnataka

ETV Bharat / state

ಪೊಲೀಸ್- ಸಾರ್ವಜನಿಕ ಸಭೆ... ಬೈಕ್ ವ್ಹೀಲಿಂಗ್, ರೋಡ್ ರೋಮಿಯೊಗಳಿಗೆ ಎಚ್ಚರಿಕೆ

ಸಮಸ್ಯೆಗಳಿದ್ದರೆ ಹೇಳಿ ಎಂದು ವೃತ್ತ ಆರಕ್ಷಕ ಪ್ರಕಾಶ್​ ಅವರು ಸಾರ್ವಜನಿಕರಿಗೆ ಕೇಳಿದಾಗ ಜನರು ಸಮಸ್ಯೆಗಳ ಸುರಿಮಳೆಯನ್ನೆ ಸುರಿಸಿದ್ರು. ಟ್ರಾಫಿಕ್, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಬೈಕ್ ವ್ಹೀಲಿಂಗ್​, ಮದ್ಯ ವ್ಯಸನಿಗಳ ಹಾವಳಿ ಹೀಗೆ ಹಲವಾರು ಸಮಸ್ಯೆಗಳನ್ನ ಪೊಲೀಸರ ಮುಂದಿಟ್ಟರು.

ಪೊಲೀಸ್ ಸಾರ್ವಜನಿಕ ಸಭೆ

By

Published : Jun 14, 2019, 11:42 AM IST

ಬೆಂಗಳೂರು:ನಗರದ ವಿಜಯಪುರ ಪೊಲೀಸ್ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಜನರಿಂದ ಸಲಹೆಗಳನ್ನೂ ಪಡೆಯಲಾಯಿತು. ಪ್ರತಿ ಗ್ರಾಮಕ್ಕೆ ಓರ್ವ ಬೀಟ್ ಪೊಲೀಸರನ್ನು ನಿಯೋಜಿಸಲಾಗುವುದು, ಅವರು ಆ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದು ತಿಳಿಸಿದರು.

ನಿಮಗೆ ಸಮಸ್ಯೆಗಳಿದ್ದರೆ ಹೇಳಿ ಎಂದು ವೃತ್ತ ಆರಕ್ಷಕರಾದ ಪ್ರಕಾಶ್​ ಸಾರ್ವಜನಿಕರಿಗೆ ಕೇಳಿದಾಗ ಜನರು ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದ್ರು. ಟ್ರಾಫಿಕ್ ಸಮಸ್ಯೆ, ಹೆಣ್ಣು ಮಕ್ಕಳನ್ನು ಚುಡಾಯಿಸುವ ಪುಂಡರು, ಬೈಕ್ ವ್ಹೀಲಿಂಗ್, ಮದ್ಯ ವ್ಯಸನಿಗಳ ಹಾವಳಿ ಹೀಗೆ ಹಲವಾರು ಸಮಸ್ಯೆಗಳನ್ನ ಪೊಲೀಸರ ಮುಂದಿಟ್ಟರು.

ಪೊಲೀಸ್ ಸಾರ್ವಜನಿಕ ಸಭೆ

ಈ ವೇಳೆ ಎಸ್ಪಿ ಸುಜಿತ್ ಮಾತನಾಡಿ, ಪ್ರಮುಖವಾಗಿ ವ್ಹೀಲಿಂಗ್ ಮಾಡುವವರ ವಿರುದ್ದ ಸೂಕ್ತ ಕ್ರಮ‌ ಕೈಗೊಳ್ಳಲಾಗುತ್ತದೆ. ‌ಇಂದೇ ಅದಕ್ಕೆ ಹೊಸ ತಂಡ ರಚನೆ‌ ಮಾಡಿ ಅಂತಹವರಿಗೆ ಶಿಕ್ಷೆ ಅಥವಾ ದಂಡ‌ ವಿಧಿಸುತ್ತೇವೆ. ಅಲ್ಲದೇ ಬೀದಿ ಬೀದಿಗಳಲ್ಲಿ ತಲೆಎತ್ತಿರುವ ಮದ್ಯದ ಮಾರಾಟವನ್ನು ತಡೆಯಲು ಕ್ರಮ‌ ಕೈಗೊಳ್ಳಲಾಗುತ್ತದೆ. ಕಾಲೇಜಿಗೆ ಹೋಗಿ ಬರುವ ಹೆಣ್ಣು ಮಕ್ಕಳನ್ನ ಚುಡಾಯಿಸುವ ಪುಂಡರಿಗಾಗಿ ಟೀಂ ರಚನೆ ಮಾಡಿ‌ ಕಾಲೇಜು ಆರಂಭವಾಗುವ ಮತ್ತು ಬಿಡುವ ವೇಳೆಯಲ್ಲಿ ತಂಡ ಕಾರ್ಯ ಪ್ರವೃತ್ತವಾಗಲಿದೆ ಎಂದು ತಿಳಿಸಿದ್ರು.

ಹೆದ್ದಾರಿಗಳಲ್ಲಿ ಖಾಸಗಿ ಬಸ್​​ಗಳ ವೇಗ ಮತ್ತು ಕಾನೂನು ಉಲ್ಲಂಘನೆ ಕುರಿತು ಬಸ್ ಮಾಲೀಕರ ಸಭೆ ಕರೆದು ಎಚ್ಚರಿಕೆ ಕೊಡುತ್ತೇವೆ. ಬಳಿಕ ಓವರ್ ಸ್ಪೀಡ್ ಹೋದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು. ಅಲ್ಲದೇ ವಾಹನಗಳ ನಿಯಂತ್ರಣಕ್ಕೆ ಸಂಚಾರ ಸೂಚನಾ ದೀಪಗಳ ಅಳವಡಿಕೆ, ಸಿ.ಸಿ.ಟಿವಿ ಕ್ಯಾಮರಾ ಅಳವಡಿಸುವುದು ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಿದ್ರು.

ಇನ್ನು 15 ದಿನಗಳಲ್ಲಿ ಎಲ್ಲಾ ಕೆಲಸಗಳು ಆರಂಭವಾಗುವುದಲ್ಲದೇ, ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮ‌ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ರು. ಜನ ಸಂಪರ್ಕ ಸಭೆಯಲ್ಲಿ ವಿಜಯಪುರ ವೃತ್ತ ಆರಕ್ಷಕರಾದ ಪ್ರಕಾಶ್, ವಿಜಯಪುರ ಪಿಎಸ್​ಐ ನರೇಶ್ ನಾಯ್ಕ್, ವಿಶ್ವನಾಥ್ ಪುರ ಪಿಎಸ್​ಐ ಮಂಜುನಾಥ್ ಸೇರಿದಂತೆ ನೂರಾರು ಜನ ಭಾಗಿಯಾಗಿದ್ರು.

ABOUT THE AUTHOR

...view details