ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಪರಿಸ್ಥಿತಿ ನೋಡಿಕೊಂಡು ಸೂಕ್ತ ಭದ್ರತೆಗೆ ಪೊಲೀಸ್ ಆಯುಕ್ತರ ಸೂಚನೆ - vatal nagaraj supports bharat band

ಭಾರತ್​ ಬಂದ್​ಗೆ ಬೆಂಬಲ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್ ಹಾಗೂ ಕರವೇ ಪ್ರವೀಣ್ ಶೆಟ್ಟಿ ಬಣ, ಬೆಂಗಳೂರು ಆಟೋ ಚಾಲಕರ ಸಂಘ, ಪೀಸ್ ಆಟೋ ಚಾಲಕರು ಮೊದಲಾದವರು ಪ್ರತಿಭಟನೆ ನಡೆಸಲಿದ್ದು, ಈ ಹಿನ್ನೆಲೆ ಪರಿಸ್ಥಿತಿ ನೋಡಿಕೊಂಡು ಸೂಕ್ತ ಭದ್ರತೆ ನೀಡುವಂತೆ ನಗರ ಪೊಲೀಸ್​ ಆಯುಕ್ತರು ಪೊಲೀಸರಿಗೆ ತಿಳಿಸಿದ್ದಾರೆ.

police protest during bharat band
ಭಾರತ್​ ಬಂದ್​ ಹಿನ್ನೆಲೆ ಪೊಲೀಸರ ನಿಯೋಜನೆ​

By

Published : Mar 26, 2021, 10:21 AM IST

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಭಾರತ ಬಂದ್​ಗೆ ಕರೆ ನೀಡಿದ್ದು, ನಗರದ ಟೌನ್ ಹಾಲ್​​ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನೆಡೆಯಲಿದೆ.

ಭಾರತ್​ ಬಂದ್​ ಹಿನ್ನೆಲೆ ಪೊಲೀಸರ ನಿಯೋಜನೆ​

ಈ ಹಿನ್ನೆಲೆ ಪರಿಸ್ಥಿತಿ ನೋಡಿಕೊಂಡು ಸೂಕ್ತ ಭದ್ರತೆ ನೀಡಲು ಆಯಾ ವಿಭಾಗದ ಡಿಸಿಪಿಗಳಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೂಚನೆ ನೀಡಿದ್ದಾರೆ.

ಭಾರತ್​ ಬಂದ್​ ಹಿನ್ನೆಲೆ ಪೊಲೀಸರ ನಿಯೋಜನೆ​


ರೈತರ ಭಾರತ್ ಬಂದ್​ಗೆ ವಾಟಾಳ್‌ ನಾಗರಾಜ್ ಬೆಂಬಲ:

ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್ ಬೆಳಗ್ಗೆ 11.30ಕ್ಕೆ ಮೆಜೆಸ್ಟಿಕ್​​ನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮಾರುವ ಮೂಲಕ ರೈತರಿಗೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿದ್ದಾರೆ. ಬಂದ್​ಗೆ ವಾಟಾಳ್‌ ನಾಗರಾಜ್ ಬೆಂಬಲಿಸಿ ಬೆಳಗ್ಗೆ 11.30ಕ್ಕೆ ಮೆಜೆಸ್ಟಿಕ್​ನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮಾರುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಿದ್ದಾರೆ.

ಇನ್ನು ಕರವೇ ಪ್ರವೀಣ್ ಶೆಟ್ಟಿ ಬಣ, ಬೆಂಗಳೂರು ಆಟೋ ಚಾಲಕರ ಸಂಘ, ಪೀಸ್ ಆಟೋ ಚಾಲಕರು, ಆದರ್ಶ ಆಟೋ ಯೂನಿಯನ್​ ಹಾಗೂ ಹೋಟೆಲ್ ಮಾಲೀಕರಿಂದ ಬಂದ್​ಗೆ ಬೆಂಬಲ ವ್ಯಕ್ತವಾಗಿದೆ.

ಮೈಸೂರು ಬ್ಯಾಂಕ್ ಸರ್ಕಲ್ ವರೆಗೂ ಜಾಥಾ:
ಭಾರತ್​ ಬಂದ್​ ಬೆಂಬಲಿಸಿ ಬೆಳಗ್ಗೆ 10 ಗಂಟೆಯ ನಂತರ ಟೌನ್ ಹಾಲ್​​​ನಿಂದ ಮೈಸೂರು ಬ್ಯಾಂಕ್ ಸರ್ಕಲ್​​ವರೆಗೂ ಜಾಥಾ ನಡೆಯಲಿದೆ. ಬೃಹತ್ ಪ್ರತಿಭಟನಾ ಮೆರವಣಿಗೆ, ಕೇಂದ್ರ ಕೃಷಿ ಕಾಯ್ದೆಗಳ ಶವಯಾತ್ರೆ ಸಹ ನಡೆಯಲಿದೆ.

ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಭಾರತ್​ ಬಂದ್​ ನಡೆಯುತ್ತಿದ್ದು, ಎಂದಿನಂತೆ ಓಲಾ- ಊಬರ್ ಟ್ಯಾಕ್ಸಿ ಸೇವೆ, ಸಾರಿಗೆ ಬಸ್, ಖಾಸಗಿ ಬಸ್, ರೈಲ್ವೆ, ಮೆಟ್ರೋ, ಲಾರಿಗಳ ಸಂಚಾರ ಇರಲಿದೆ.

ಭಾರತ್​ ಬಂದ್​ ಹಿನ್ನೆಲೆ ಪೊಲೀಸರ ನಿಯೋಜನೆ​

ABOUT THE AUTHOR

...view details