ಬೆಂಗಳೂರು: ಆರ್.ಆರ್. ನಗರ ಉಪ ಚುನಾವಣೆ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಇಂದು ಮತ್ತೆ ಹೆಚ್ಚುವರಿಯಾಗಿ ಖಾಕಿ ಕಣ್ಗಾವಲು ಹಾಕಲಾಗಿದೆ.
ಆರ್.ಆರ್.ನಗರ ಉಪ ಚುನಾವಣೆ: ಕ್ಷೇತ್ರದ ಸುತ್ತ ಸಿಐಎಸ್ಎಫ್ ತಂಡ ಗಸ್ತು - R R Nagara by-election
ಆರ್.ಆರ್. ನಗರ ಕ್ಷೇತ್ರದ ವ್ಯಾಪ್ತಿಯ ಉತ್ತರ ವಿಭಾಗದಲ್ಲಿ ಸೆಂಟ್ರಲ್ ಱಪಿಡ್ ಆ್ಯಕ್ಷನ್ ಫೋರ್ಸ್ ತಂಡ ಆಗಮಿಸಿದ್ದು,ಇಂದಿನಿಂದ ಕ್ಷೇತ್ರದಾದ್ಯಂತ ಸಿಐಎಸ್ಎಫ್ ತಂಡ ಗಸ್ತು ತಿರುಗಲಿದೆ.
![ಆರ್.ಆರ್.ನಗರ ಉಪ ಚುನಾವಣೆ: ಕ್ಷೇತ್ರದ ಸುತ್ತ ಸಿಐಎಸ್ಎಫ್ ತಂಡ ಗಸ್ತು police protection in the R.R Nagar area](https://etvbharatimages.akamaized.net/etvbharat/prod-images/768-512-9315250-347-9315250-1603699369489.jpg)
ಸಿಐಎಸ್ಎಫ್ ತಂಡ ಗಸ್ತು
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ರೀತಿ ಇಂದು ಸಂಜೆ 3 ಗಂಟೆಯಿಂದ ಉತ್ತರ ವಿಭಾಗದಲ್ಲಿ ರೂಟ್ ಮಾರ್ಚ್ ಮಾಡಲಿದ್ದು, ಸಿಐಎಸ್ಎಫ್, ಕೆಎಸ್ಆರ್ಪಿ, ಸಿಎಆರ್ ಹಾಗೂ ಪೊಲೀಸ್ ಅಧಿಕಾರಿಗಳು ರೂಟ್ ಮಾರ್ಚ್ನಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ಪಕ್ಷದವರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಈಗಾಗಲೇ ಮತಯಾಚನೆ ಮಾಡ್ತಿದ್ದಾರೆ.
ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಸದ್ಯ ಕಟ್ಟೆಚ್ಚರವನ್ನು ಆರ್.ಆರ್ ನಗರ ವ್ಯಾಪ್ತಿಯಲ್ಲಿ ವಹಿಸಲಾಗಿದೆ.