ಕರ್ನಾಟಕ

karnataka

ಚಾಮರಾಜಪೇಟೆ ಈದ್ಗಾ ಮೈದಾನದ ಸುತ್ತಮುತ್ತ ಪೊಲೀಸ್​ ಸರ್ಪಗಾವಲು

By

Published : Aug 31, 2022, 5:20 PM IST

ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಸೂಚನೆ ಮೇರೆಗೆ ಚಾಮರಾಜಪೇಟೆ ಈದ್ಗಾ ಮೈದಾನ ಸುತ್ತ ಮುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.

ಈದ್ಗಾ ಮೈದಾನದ ಸುತ್ತಮುತ್ತ ಪೊಲೀಸ್​ ಸರ್ಪಗಾವಲು
ಈದ್ಗಾ ಮೈದಾನದ ಸುತ್ತಮುತ್ತ ಪೊಲೀಸ್​ ಸರ್ಪಗಾವಲು

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ಸುತ್ತಮುತ್ತ ಗಣೇಶೋತ್ಸವಕ್ಕೆ ನಿರ್ಬಂಧದ ಹಿನ್ನೆಲೆ ಖಾಕಿ ಪಡೆಯನ್ನು ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಲಾಗಿದೆ‌.

ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಸೂಚನೆ ಮೇರೆಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಇಬ್ಬರು ಡಿಸಿಪಿ, 21 ಜನ ಎಸಿಪಿ, 50 ಮಂದಿ ಇನ್ಸ್​ಪೆಕ್ಟರ್, 130 ಪಿಎಸ್​ಐ, 126 ಎಎಸ್​ಐ, 900 ಹೆಚ್​ಸಿಪಿಸಿ, 120 ಮಂದಿ ಆರ್​ಎಎಫ್​ ಸಿಬ್ಬಂದಿ ಹಾಗೂ 10ಕ್ಕೂ ಹೆಚ್ಚು ಕೆಎಸ್​ಆರ್​ಪಿ ತುಕಡಿ ಸೇರಿ ಭದ್ರತೆಗಾಗಿ 1240 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಚಾಮರಾಜಪೇಟೆ ಈದ್ಗಾ ಮೈದಾನದ ಸುತ್ತಮುತ್ತ ಪೊಲೀಸ್​ ಸರ್ಪಗಾವಲು

ನಾಲ್ಕು ದಿಕ್ಕಿನಲ್ಲೂ ಬ್ಯಾರಿಕೇಡ್: ಕಿಡಿಗೇಡಿಗಳಿಗೆ ಎಚ್ಚರ ನೀಡುವ ಸಲುವಾಗಿ ಈಗಾಗಲೇ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಗಿದೆ‌. ಎರಡು ಎಕರೆ ಮೈದಾನದ ನಾಲ್ಕು ದಿಕ್ಕಿನಲ್ಲೂ ಬ್ಯಾರಿಕೇಡ್ ಹಾಕಿ ಬಂದ್​ ಮಾಡಲಾಗಿದೆ. ಒಂದು ಕಡೆ ಮಾತ್ರ ಮೈದಾನದ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ.

ಓದಿ:ಕಾನೂನು ಪ್ರಕಾರವೇ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ: ಜಗದೀಶ್ ಶೆಟ್ಟರ್

ABOUT THE AUTHOR

...view details