ಕರ್ನಾಟಕ

karnataka

ETV Bharat / state

ಪೊಲೀಸ್​ ಅಂದ್ರೆ ಬರಿ ಲಾಟಿ ಮಾತ್ರ ಹಿಡಿಯಲ್ಲ, ಕುಂಚ ಹಿಡಿದು ಕಲಾವಿದ ಕೂಡ ಆಗ್ತಾರೆ!

ಕಳೆದ ಒಂದೂವರೆ ವರ್ಷಗಳಿಂದ ಪೊಲೀಸ್ ಸಿಬ್ಬಂದಿ ಬರೆದ ವಿವಿಧ ಕಲಾಕೃತಿಗಳನ್ನು‌‌ ನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಗುರುವಾರ ಪ್ರದರ್ಶನಕ್ಕೆ ಇಡಲಾಗಿತ್ತು. ಜನರನ್ನು ರಕ್ಷಣೆ ಮಾಡುತ್ತಿರುವುದು, ಮೈಸೂರು ಲ್ಯಾನ್ಸರ್ಸ್ ಯೋಧರ ಶಕ್ತಿ ಪ್ರದರ್ಶನದ ಚಿತ್ರಗಳು ಅತಿ ಹೆಚ್ಚು ಗಮನ ಸೆಳೆದವು.

commissioner-office
commissioner-office

By

Published : Jan 31, 2020, 12:08 AM IST

ಬೆಂಗಳೂರು:ಪೊಲೀಸರ ಅಂದ್ರೆ ಯಾವಾಗಲೂ ಖಾಕಿ ಹಾಕಿಕೊಂಡು, ಕೈಯಲ್ಲಿ ಲಾಟಿ ಹಿಡಿದು ಕೆಲಸ ಮಾಡುವ ವ್ಯಕ್ತಿಗಳು ಅನ್ನೊ ಭಾವನೆವಿದೆ. ಆದರೆ ಆ ಖಾಕಿ ಒಳಗೊಂದು ಟಾಲೆಟ್​ ಅಡಗಿರೊದನ್ನ ನೋಡಬೇಕು ಅಂದ್ರೆ, ಅದನ್ನ ಹೊರತೆಗಿಸೊಕೆ ಒಬ್ಬರು ಬರಲೇಬೇಕು.

ಸದ್ಯ ಬೆಂಗಳೂರ ಪೊಲೀಸರಲ್ಲಿ ಹುದುಗಿರುವ ಸೃಜನಾತ್ಮಕ ಪ್ರತಿಭೆಯನ್ನ ಅನಾವರಣಗೊಳಿಸಿದ್ದು ‌ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್. ಕಳೆದ ಒಂದೂವರೆ ವರ್ಷಗಳಿಂದ ಪೊಲೀಸ್ ಸಿಬ್ಬಂದಿ ಬರೆದ ವಿವಿಧ ಕಲಾಕೃತಿಗಳನ್ನು‌‌ ನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಇಂದು ಪ್ರದರ್ಶನಕ್ಕೆ ಇಡಲಾಗಿತ್ತು. ಜನರನ್ನು ರಕ್ಷಣೆ ಮಾಡುತ್ತಿರುವುದು, ಮೈಸೂರು ಲ್ಯಾನ್ಸರ್ಸ್ ಯೋಧರ ಶಕ್ತಿ ಪ್ರದರ್ಶನದ ಚಿತ್ರಗಳು ಅತಿ ಹೆಚ್ಚು ಗಮನ ಸೆಳೆಯಿತು.

ಪೊಲೀಸ್ ಸಿಬ್ಬಂದಿ ಬರೆದ ವಿವಿಧ ಕಲಾಕೃತಿಗಳು

ಈ ಬಗ್ಗೆ ಮಾತನಾಡಿದ ನಗರ ಪೊಲೀಸ್​​ ಆಯುಕ್ತರು, 1914ರಲ್ಲಿ ಮೈಸೂರು ಲ್ಯಾನ್ಸರ್ಸ್, ಬರೋಡಾ ಲ್ಯಾನ್ಸರ್ಸ್ ಮತ್ತು ಹೈದರಾಬಾದ್ ಲ್ಯಾನ್ಸರ್ಸ್ ಯೋಧರು ಇಸ್ರೇಲ್ ಸ್ವಾತಂತ್ರ್ಯಯುಧ್ಧದಲ್ಲಿ ಭಾಗವಹಿಸಿದ್ದರು. ಇಸ್ರೇಲ್ ಸ್ವಾತಂತ್ರ್ಯಗೊಳ್ಳಲು ಭಾರತದ ಯೋಧರು-ಅಂದರೆ ಮೈಸೂರು ಲ್ಯಾನ್ಸರ್ಸ್ ಪಾತ್ರ ದೊಡ್ಡದಿತ್ತು. 1914 ರಲ್ಲಿ ಮೈಸೂರಿನಿಂದ ಮಂಗಳೂರು ಬಂದರು ಮೂಲಕ ಇಸ್ರೇಲ್​ಗೆ ತೆರಳಿ ಯುದ್ಧದಲ್ಲಿ ಭಾಗಿಯಾಗಿ ಗೆದ್ದಿದ್ದರು. ಯುದ್ಧದ ಗೆಲುವಿನಲ್ಲಿ ನಮ್ಮ ಮೈಸೂರು ಲ್ಯಾನ್ಸರ್ಸ್ ಪಾತ್ರ ಅಪಾರವಾಗಿದೆ. 2500 ಕುದುರೆ, 500 ಎತ್ತಿನ ಗಾಡಿ, 3000 ಕಾಲ್ದಳ ಪ್ರಯಾಣ ಮಾಡಿ ಯುದ್ಧದಲ್ಲಿ ಗೆದ್ದಿದ್ದರು.‌ ನಮ್ಮ ಮೈಸೂರು ಲ್ಯಾನ್ಸರ್ಸ್ ಗೆಲುವಿನ‌ ಸವಿನೆನಪಿನಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ನಮ್ಮ‌ ಕೆ.ಎಸ್.ಆರ್.ಪಿ ಪೊಲೀಸರ ಶ್ರಮಕ್ಕೆ ಬೆಲೆಕಟ್ಟಲಾಗದು. ಸದ್ಯ 40ಕ್ಕಿಂತ ಹೆಚ್ಚು ಕಲಾಕೃತಿಗಳಿದ್ದು ನಾಳೆಯಿಂದ ಈ ಚಿತ್ರಗಳು ಸಾರ್ವಜನಿಕ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.

ABOUT THE AUTHOR

...view details