ಬೆಂಗಳೂರು : ಕೊರೊನಾ ಲಾಕೌಡೌನ್ ಹಿನ್ನೆಲೆಯಲ್ಲಿ ದಿನಪತ್ರಿಕೆ ಸೇರಿ ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪೊಲೀಸ್ ಸಿಬ್ಬಂದಿಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.
ದಿನಪತ್ರಿಕೆ ಸೇರಿ ಅಗತ್ಯ ಸೇವೆಗಳಿಗೆ ತೊಂದರೆ ಮಾಡಬಾರದು: ಭಾಸ್ಕರ್ ರಾವ್ ಸೂಚನೆ - ಅಗತ್ಯ ಸೇವೆಗಳಿಗೆ ತೊಂದರೆ ಮಾಡಬಾರದು
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಆದೇಶ ಹೊರಡಿಸಿದ್ದು, ಸರ್ಕಾರದ ಜೊತೆ ಕೈ ಜೋಡಿಸಿರುವ ಪೊಲೀಸ್ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪೊಲೀಸ್ ಸಿಬ್ಬಂದಿಗೆ ಖಡಕ್ ಸಂದೇಶ ರವಾನೆ ಮಾಡಿದ್ದು, ದಿನಪತ್ರಿಕೆ ಸೇರಿ ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದಾರೆ.
![ದಿನಪತ್ರಿಕೆ ಸೇರಿ ಅಗತ್ಯ ಸೇವೆಗಳಿಗೆ ತೊಂದರೆ ಮಾಡಬಾರದು: ಭಾಸ್ಕರ್ ರಾವ್ ಸೂಚನೆ Bhaskar Rao](https://etvbharatimages.akamaized.net/etvbharat/prod-images/768-512-6592980-thumbnail-3x2-koro.jpg)
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಭಾಸ್ಕರ್ ರಾವ್ ಸೂಚನೆ
ಈ ಕುರಿತಂತೆ ಕಮಿಷನರ್ ಭಾಸ್ಕರ್ ರಾವ್ ಕೊಟ್ಟ ಸೂಚನೆಗಳು ಹೀಗಿವೆ:
- 1.ಹಾಲು ,ಪೇಪರ್ ತರಕಾರಿ ತೆಗೆದುಕೊಳ್ಳುವವರಿಗೆ ಹಿಂಸೆ ಕೊಡಬಾರದು. ಎಟಿಎಂಗಳಿಗೆ ಹಣ ತುಂಬುವವರಿಗೆ ಅವಕಾಶ ಕೊಡಬೇಕು. ಪಾಸ್ ಇಲ್ಲದವರಿಗೆ ಅವಕಾಶ ಮಾಡಿಕೊಡಬೇಕು.
- 2.ದಿನಸಿ ಅಂಗಡಿಗಳು,ಮಾರ್ಟ್ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪೇಂಟ್ ಮಾಡಿಸಬೇಕು.
- 3. ಪ್ರತಿ ಪೊಲೀಸ್ ಠಾಣೆಯಲ್ಲಿ ಪಿಆರ್ಓ ಕಚೇರಿ ರಚಿಸಿ ಜನರಿಗೆ ಸರಿಯಾಗಿ ಸ್ಪಂದಿಸಬೇಕು. ಸಮಸ್ಯೆ ಸರಿ ಹೋಗಿಲ್ಲ ಅಂದಲ್ಲಿ ಡಿಸಿಪಿ ಎಸಿಪಿಗಳ ಹತ್ತಿರ ಕಳುಹಿಸಬೇಕು.
- 4.ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ಗಳನ್ನು ಬಳಸಬೇಕು. ಅವಶ್ಯಕತೆ ಇದ್ದಲ್ಲಿ ಮಾತ್ರ ಬಿಡಬೇಕು.
- 5.ಈಗಾಗಲೇ ಸೀಜ್ ಮಾಡಿರುವವರ ವೆಹಿಕಲ್ ಓನರ್ ಗಳಿಗೆ ಸೂಚಿಸಬೇಕು ಇನ್ನೊಮ್ಮೆ ಹೀಗೆ ಮಾಡದಂತೆ ತಿಳಿ ಹೇಳಿ ಬಿಡಬೇಕು ಮತ್ತೆ ಆ ರೀತಿ ಆದರೆ ಟು ವ್ಹೀಲರ್ ಜೊತೆ 4ವ್ಹೀಲರ್ ಕೂಡ ಸೀಜ್ ಮಾಡ್ತೀವಿ ಅಂತ ವಾರ್ನಿಂಗ್ ನೀಡಬೇಕು.
- 6.ಎಲ್ಲಾ ಕಡೆ ಪಾಸ್ಗಳನ್ನು ವಿತರಣೆ ಮಾಡಲಾಗಿದ್ದು, ಊಟ ಪೂರೈಕೆ ಹಾಗೂ ಅಗತ್ಯ ಇರುವವರನ್ನು ಎಸಿಪಿಗಳು ಸರಿಯಾಗಿ ತಪಾಸಣೆ ಮಾಡಬೇಕು.
- 7.ಪೊಲೀಸರು ಎಲ್ಲಾ ಭಾಗದ ವಿಡಿಯೋ ಚಿತ್ರಣ ಮಾಡಬೇಕು.
- 8.ಪೊಲೀಸ್ ಅಧಿಕಾರಿಗಳು ಲಾಠಿ ಬಳಸಬಾರದು. ವಾಹನಗಳನ್ನು ವಶಕ್ಕೆ ಪಡೆದ್ದಲ್ಲಿ ವಿಡಿಯೋ ಮಾಡಿಕೊಳ್ಳಬೇಕು.
- 9.ಪಿಜಿಗಳ ಮುಖ್ಯಸ್ಥರು ತೊಂದರೆ ನೀಡುತ್ತಿದ್ದರೆ ಅಂತವರಿಗೆ ಬುದ್ಧಿ ಹೇಳಿ ಪಿಜಿಯಲ್ಲೇ ಊಟದ ವ್ಯವಸ್ಥೆ ಮಾಡಬೇಕು.
- 10.ಪೊಲೀಸ್ ಸಿಬ್ಬಂದಿಗೂ ವಿಶ್ರಾಂತಿಯ ಅವಶ್ಯಕೆತಯಿದ್ದು, ಮೂರು ಶಿಫ್ಟ್ಗಳಲ್ಲಿ ಕೆಲಸ ಮಾಡಬೇಕು.
- 11.ಡೈಯಾಲಿಸಿಸ್ ಹಾಗೇ ಕೆಲ ವೈದ್ಯಕೀಯ ನೆರವು ಬೇಕಿದ್ದಲ್ಲಿ ಅಂತಹವರಿಗೆ ಹೊಯ್ಸಳ ವಾಹನ ಪಿಕಪ್ ಅಂಡ್ ಡ್ರಾಪ್ ಮಾಡುವ ಮೂಲಕ ಜನರ ಆರೋಗ್ಯಕ್ಕೆ ಸ್ಪಂದಿಸಬೇಕು.
- 12.ಮಾರ್ನಿಂಗ್ ವಾಕ್ ಹೋಗುವವರಿಗೆ ಸರ್ಕಾರ ಕಡಿವಾಣ ಹಾಕಿದೆ. ಗುಂಪಲ್ಲಿ ವಾಕ್ ಹೋಗುವವರಿಗೆ ಮೈಕ್ನಲ್ಲಿ ಅನೌನ್ಸ್ ಮಾಡಿ ವಾಪಸ್ ಮನೆಗೆ ಕಳುಹಿಸಬೇಕು.
- 13.ಬೇರೆ ರಾಜ್ಯಗಳಿಂದ ಬಂದವರಿಗೆ ಸಮಸ್ಯೆಯಾದರೆ ಆಯಾ ಠಾಣೆ ವ್ಯಾಪ್ತಿಗಳ ಪೊಲೀಸರು ಸ್ಪಂದಿಸಬೇಕು. ಇಲ್ಲ ಅಂದರೆ ಡಿಸಿಪಿಗಳ ಗಮನಕ್ಕೆ ತರಬೇಕು.
- 14.ಆಹಾರ ಪೂರೈಕೆ, ಸಹಾಯ ಮಾಡಿ ಕೂಡಲೇ ಅವರಲ್ಲ ಮನೆಗಳಿಗೆ ತೆರಳುವಂತೆ ನೋಡಿಕೊಳ್ಳಬೇಕು.
ಈ ಮೂಲಕ ಸರ್ಕಾರದೊಂದಿಗೆ ಕೈ ಜೋಡಿಸಿ ಹಗಲಿರುಳು ಕರ್ತವ್ಯ ನಿರತರಾಗಿರುವ ಪೊಲೀಸ್ ನಿಬ್ಬಂದಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಧನ್ಯವಾದ ಅರ್ಪಿಸಿದ್ಧಾರೆ.
Last Updated : Mar 30, 2020, 2:49 PM IST