ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೊದಲ ಪೊಲೀಸ್ ಅಧಿಕಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮರಿಮಾಚಯ್ಯ ಎ.ಆರ್.ಎಸ್.ಐ. ಮೃತ ಪೊಲೀಸ್ ಅಧಿಕಾರಿ
ಪೊಲೀಸ್ ಅಧಿಕಾರಿಯನ್ನು ಬಲಿ ಪಡೆದ ಕೊರೊನಾ - bangalore corona news
ಕಳೆದ ಗುರುವಾರ ಕೊರೊನಾ ಸೋಂಕಿಗೆ ಒಳಗಾದ ಮರಿಮಾಚಯ್ಯ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಫಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರ ಶಸಸ್ತ್ರ ಮೀಸಲು ಪಡೆಯಲ್ಲಿ ಎ.ಆರ್.ಎಸ್.ಐ. ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಗುರುವಾರ ಕೊರೊನಾ ಸೋಂಕಿಗೆ ಒಳಗಾದ ಇವರು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಫಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಬಲಿಯಾದ ಮೊದಲ ಪೊಲೀಸ್ ಸಿಬ್ಬಂದಿ ಇವರಾಗಿದ್ದಾರೆ. ಜಿಲ್ಲಾ ಕೇಂದ್ರದ ಬ್ಯಾಡರಹಳ್ಳಿಯ ಬಳಿಯಿರುವ ಡಿ.ಆರ್. ಕೇಂದ್ರ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು.1986 ರಲ್ಲಿ ಕರ್ತವ್ಯಕ್ಕೆ ಸೇರಿದ ಇವರು ಇನ್ನು 13 ತಿಂಗಳಲ್ಲಿ ನಿವೃತ್ತಿ ಆಗುತ್ತಿದ್ದರು.