ಬೆಂಗಳೂರು: ಬೇಗ ಬೇಗ ವ್ಯಾಪಾರ ಮುಗಿಸಿ ತೆರಳುವಂತೆ ಸೂಚನೆ ನೀಡಲು 9 ಗಂಟೆಯಿಂದಲೇ ಮಾರ್ಷಲ್ಗಳು ಮತ್ತು ಪೊಲೀಸರು ಶುರು ಮಾಡಿ, ಕೆ.ಆರ್. ಮಾರ್ಕೆಟ್ನಲ್ಲಿ ರೌಂಡ್ಸ್ ಹಾಕಿದರು.
ಅಂಗಡಿಗಳ ಬಳಿ ತೆರಳಿ ಸೂಚನೆ ನೀಡಿದ ಪೊಲೀಸರ ನಡೆ ಲಾಕ್ಡೌನ್ ಬಿಗಿಗೊಳಿಸಲು ತಯಾರಿಯಂತೆ ಕಂಡು ಬಂದಿತು. ಆದಷ್ಟು ಬೇಗ ವ್ಯಾಪಾರ ಮುಗಿಸಿ ಹೊರಡುವಂತೆ ರಸ್ತೆ ಬದಿ ಅಂಗಡಿ, ವ್ಯಾಪಾರಿಗಳಿಗೂ ತಾಕೀತು ಮಾಡಿದರು. ಹೊಯ್ಸಳ ವಾಹನದಲ್ಲಿ ಕೂಡ ಪೊಲೀಸರು ಅನೌನ್ಸ್ ಮಾಡಿದರು.
ಲಾಕ್ಡೌನ್ ವಿಸ್ತರಣೆಗೆ ಮಿಶ್ರ ಪ್ರತಿಕ್ರಿಯೆ:
ಇದೇ ವೇಳೆ ಲಾಕ್ಡೌನ್ ವಿಸ್ತರಣೆಗೆ ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಯಿತು. ಲಾಕ್ಡೌನ್ ಮುಂದುವರೆಸಿದ್ದು ಒಳ್ಳೆಯದು. ಆದರೆ ಜನರ ಜೀವನವೂ ಮುಖ್ಯ. ವ್ಯಾಪಾರ ಮಾಡಲು ಇನ್ನೂ ಸಮಯಾವಕಾಶ ಇದೆ. ಆದರೂ ಬೇಗ ಹೋಗುವಂತೆ ಪೊಲೀಸರು ಸೂಚಿಸುತ್ತಿದ್ದಾರೆ. ಒಂದೆರಡು ಗಂಟೆಗಳಲ್ಲಿ ವ್ಯಾಪಾರ ಹೇಗೆ ಮಾಡುವುದು ಎಂದು ಅಳಲು ತೋಡಿಕೊಂಡರು.
ಇದನ್ನೂ ಓದಿ:ಕೊಪ್ಪಳ: ಮದ್ಯ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು
ಸರ್ಕಾರ ಈಗಾಗಲೇ ಪ್ಯಾಕೇಜ್ ಘೋಷಣೆ ಮಾಡಿದ್ದು ಒಳ್ಳೆಯದು ಎಂದು ಕೆಲವು ವ್ಯಾಪಾರಿಗಳು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಲಾಕ್ಡೌನ್ ಮುಂದುವರೆದು ಜೀವನ ನಡೆಸೋದು ಕಷ್ಟ ಆಗಿದೆ ಎಂದರು. ದಿನದ ದುಡಿಮೆಯಿಂದ ಜೀವನ ನಿರ್ವಹಣೆ ಆಗಬೇಕಿದೆ. ಈಗಲೇ ಬಹಳ ಸಂಕಟ ಪಡುತ್ತಿದ್ದೇವೆ. ಇನ್ನೂ ಲಾಕ್ಡೌನ್ ಮುಂದುವರೆದರೆ ಬಹಳ ಕಷ್ಟ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.