ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ನೀಡುವ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಪದಕ ಘೋಷಣೆಯಾಗಿದ್ದು, ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 175 ಪೊಲೀಸ್ ಅಧಿಕಾರಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪೊಲೀಸ್ ಪದಕ ಘೋಷಣೆ: ರಾಜ್ಯದ 39 ಪೊಲೀಸ್ ಅಧಿಕಾರಿಗಳು ಆಯ್ಕೆ - Prime Minister Medal
ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ನೀಡಲ್ಪಡುವ ಪ್ರಧಾನಿ ಮಂತ್ರಿ ಮತ್ತು ರಾಷ್ಟ್ರಪತಿ ಪದಕ ಘೋಷಣೆಯಾಗಿದ್ದು, ಈ ಭಾರಿ ರಾಜ್ಯದಿಂದ ಒಟ್ಟು 39 ಮಂದಿ ಅಧಿಕಾರಿಗಳು ಆಯ್ಕೆಗೊಂಡಿದ್ದಾರೆ. ಇದರಲ್ಲಿ ಓರ್ವ ಅಧಿಕಾರಿಗೆ ರಾಷ್ಟ್ರಪತಿ ಪದಕ ಒಲಿದು ಬಂದಿದೆ.
ಪೊಲೀಸ್ ಪದಕ ಘೋಷಣೆ: ರಾಜ್ಯದ 39 ಪೊಲೀಸ್ ಅಧಿಕಾರಿಗಳು ಆಯ್ಕೆ.
ಈ ಬಾರಿ ರಾಜ್ಯದ ಒಟ್ಟು 39 ಮಂದಿ ಪೊಲೀಸ್ ಅಧಿಕಾರಿಗಳು ಪ್ರಧಾನಿ ಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ಚಿಕ್ಕಪೇಟೆಯ ಎಸಿಪಿ ಮಹಾಂತರೆಡ್ಡಿ, ಹಲಸೂರು ಉಪವಿಭಾಗದ ಎಸಿಪಿ ಟಿ.ಮಂಜುನಾಥ್, ಸಿಐಡಿ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರವಿಶಂಕರ್, ಮಾಗಡಿ ರಸ್ತೆ ಉಪವಿಭಾಗದ ಎಸಿಪಿ ವೇಣುಗೋಪಾಲ್ ಪ್ರಶಸ್ತಿಗೆ ಭಾಜರಾಗಿದ್ದಾರೆ.
ಪೈಕಿ ಓರ್ವ ಪೊಲೀಸ್ ಅಧಿಕಾರಿ ರಾಷ್ಟ್ರಪತಿ ಪದಕಕ್ಕೆ ಆಯ್ಕೆಗೊಂಡಿದ್ದಾರೆ.