ಕರ್ನಾಟಕ

karnataka

ETV Bharat / state

ಆರೋಪ-ಪ್ರತ್ಯಾರೋಪ: ಪೊಲೀಸ್​ ಠಾಣೆ ಮೆಟ್ಟಿಲೇರಿದ ಫೇಸ್​ಬುಕ್​ ಫ್ರೆಂಡ್ಸ್​ - ಲೈಗಿಂಕ ದೌರ್ಜನ್ಯ ಪ್ರಕರಣ

ಬೆಂಗಳೂರಿನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಲೈಗಿಂಕ ದೌರ್ಜನ್ಯ ಆರೋಪ: ದೂರು ನೀಡಿದ ಯುವತಿ

By

Published : Sep 2, 2019, 4:30 PM IST

Updated : Sep 2, 2019, 6:06 PM IST

ಬೆಂಗಳೂರು: ನಗರದಲ್ಲೊಂದು ಫೇಸ್​ಬುಕ್​ ಪರಿಚಯದ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆರೋಪಿ ಶಿವಕುಮಾರ್ ಭೋಜಶೆಟ್ಟರ್

ಫೇಸ್​ಬುಕ್​ನಲ್ಲಿ ಯುವತಿವೋರ್ವಳನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ ಶಿವಕುಮಾರ್ ಭೋಜಶೆಟ್ಟರ್ ಯುವತಿಗೆ ಕೆಲಸ ಕೊಡಿಸುವ ನೆಪದಲ್ಲಿ ಎಫ್​ಬಿಯಲ್ಲಿ ಮೆಸೇಜ್​ ಮಾಡ್ತಿದ್ದನಂತೆ. ನಂತರ ಮೆಸ್ಸೆಂಜ​ರ್​ ಮೂಲಕ ಯುವತಿಯ ಮೊಬೈಲ್ ನಂಬರ್ ಪಡೆದು, ಹೊಸ ಪ್ರಾಜೆಕ್ಟ್ ಇದೆ. ಈ ಕುರಿತು ಮಾತನಾಡಬೇಕೆಂದು ಕಾಫೀ ಡೇ ಗೆ ಕರೆಸಿಕೊಂಡಿದ್ದ ಎನ್ನಲಾಗ್ತಿದೆ.

ಕಾಫೀ ಡೇಯಲ್ಲಿ ಯವತಿಯೊಂದಿಗೆ ಶಿವಕುಮಾರ್​ ‌ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, ಅಸಭ್ಯವಾಗಿ ವರ್ತಿಸಿದ್ದ. ಈ ವಿಷಯವನ್ನು ಯಾರಿಗಾದರು ಹೇಳಿದ್ರೆ ಕೊಲ್ಲುವುದಾಗಿ ಧಮ್ಕಿ ಹಾಕಿದ್ದನಂತೆ. ಇದರಿಂದ ಮನನೊಂದ‌ ಯುವತಿ ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಯುವತಿಯ ದೂರಿನ ಅನ್ವಯ ಆರೋಪಿ ಶಿವಕುಮಾರ ಭೋಜ ಶೆಟ್ಟರ್​ನನ್ನು ಸದ್ಯ ಹನುಮಂತನಗರ ಪೊಲೀಸರು ‌ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ ಶಿವಕುಮಾರ್ ಭೋಜಶೆಟ್ಟರ್ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಯುವತಿಯ ವಿರುದ್ಧ ಹನಿಟ್ರ್ಯಾಪ್ ಮಾಡಿದ್ದಾಳೆಂದು ಪ್ರತಿದೂರು ನೀಡಿದ್ದಾನೆ. ಸದ್ಯ ಎರಡು ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Last Updated : Sep 2, 2019, 6:06 PM IST

ABOUT THE AUTHOR

...view details