ಕರ್ನಾಟಕ

karnataka

ETV Bharat / state

ಇದು ನ್ಯಾಯಾನಾ.. ಇದು ನೀತಿನಾ? ಪೊಲೀಸರಿಂದ ವ್ಯಕ್ತಿಗೆ ಹಿಗ್ಗಾ ಮುಗ್ಗ ಥಳಿತ... ಸದ್ದು ಮಾಡ್ತಿರೋ ವಿಡಿಯೋ - bangalore police news

ಸಬ್ ಇನ್ಸ್​ಫೆಕ್ಟರ್​ ಶ್ರೀಕಂಠೇಗೌಡ  ಅವರು ಥಳಿಸಿರೋದು ಲೈಂಗಿಕ ಕಿರುಕುಳ ನೀಡುತ್ತಿದ್ದ  ಯಶವಂತ ಎಂಬ ವ್ಯಕ್ತಿಗೆ. ಆತ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ‌ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿನ  ಪಾರ್ಕಿಂಗ್​ ನಲ್ಲಿ ಕೆಲಸ ಮಾಡುವ ಹುಡುಗಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಥಳಿಸಿದ್ದಾರೆ ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಪೊಲೀಸರಿಂದ ವ್ಯಕ್ತಿಗೆ ಹಿಗ್ಗಾ ಮುಗ್ಗ ಥಳಿತ

By

Published : Sep 12, 2019, 2:23 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬನಿಗೆ ಪೊಲೀಸರು ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ವೈರಲ್ ಆಗಿದೆ.

ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಗೆ ಪೊಲೀಸರು ಮನಬಂದಂತೆ ಥಳಿಸಿದ್ದಾರೆ. ಸಬ್ ಇನ್ಸ್​ಫೆಕ್ಟರ್​ ಶ್ರೀಕಂಠೇಗೌಡ ಅವರು ಈ ರೀತಿ ಥಳಿಸಿದ್ದು, ಈ ದೃಶ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪೊಲೀಸರಿಂದ ವ್ಯಕ್ತಿಗೆ ಹಿಗ್ಗಾ ಮುಗ್ಗ ಥಳಿತ

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಸಬ್ ಇನ್ಸ್​ಫೆಕ್ಟರ್​ ಶ್ರೀಕಂಠೇಗೌಡ ಅವರು ಥಳಿಸಿರೋದು ಲೈಂಗಿಕ ಕಿರುಕುಳ ನೀಡುತ್ತಿದ್ದ ಯಶವಂತ ಎಂಬ ವ್ಯಕ್ತಿಗೆ. ಆತ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ‌ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿನ ಪಾರ್ಕಿಂಗ್​ ನಲ್ಲಿ ಕೆಲಸ ಮಾಡುವ ಹುಡುಗಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಹಿನ್ನೆಲೆಯಲ್ಲಿ ಬಂದು ದೂರು ಆಧರಿಸಿ ಹೀಗೆ ಥಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸಬ್ ಇನ್ಸ್​ಫೆಕ್ಟರ್​ ಶ್ರೀಕಂಠೇಗೌಡ

ಬಡ ಹೆಣ್ಣುಮಗಳಿಗೆ ಲೈಂಗಿಕ ಕಿರುಕುಳ ನೀಡ್ತಾ ಇದ್ದ ಕಾರಣಕ್ಕೆ ಯಶವಂತನನ್ನು ಥಳಿಸಿದ್ದಾರೆ. ಆದರೆ, ಸಬ್​ಇನ್ಸ್​ಫೆಕ್ಟರ್​ಗೆ ಆಗದ ಠಾಣೆಯಲ್ಲಿ ಇರುವ ಒಬ್ಬರೇ ಈ ದೃಶ್ಯ ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ. ಈ ಸಂಬಂದ ತನಿಖೆ ಮುಂದುವರೆಸಿದ್ದೇವೆ. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ಡಿಸಿಪಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details