ಬೆಂಗಳೂರು:ಟಫ್ರೂಲ್ಸ್ ಈಗ ಮತ್ತಷ್ಟು ಟಫ್ ಆಗುವ ಸಾಧ್ಯತೆಯಿದ್ದು, ಇಂದಿನಿಂದ ಮತ್ತಷ್ಟು ಪೊಲೀಸರು ಕಾರ್ಯಾಚರಣೆಗೆ ಬಿಗಿಯಾಗಲಿದ್ದಾರೆ.
ಕೊರೊನಾ ಸೋಂಕು ಹರಡುವಿಕೆ ತ್ರೀವವಾಗಿ ಇಳಿಸಲು 14 ದಿನಗಳ ಕಾಲ ಕರ್ಫ್ಯೂ ವಿಧಿಸಲಾಗಿದೆ. ಕಳೆದ ಮೂರು ದಿನಗಳಿಂದ ಪೊಲೀಸರು ತಪಾಸಣೆ ನಡೆಸಿದ್ದರೂ ಅನಗತ್ಯವಾಗಿ ವಾಹನ ಸಂಚಾರ ನಡೆಸುತ್ತಿದ್ದ 1707 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ 1530 ಬೈಕ್ ಗಳು ಹಾಗೂ 97 ವಾಹನಗಳು ಸೀಜ್ ಆಗಿದೆ.
ಅನಗತ್ಯವಾಗಿ ಓಡಾಡುವವರನ್ನು ಕಡಿಮೆಗೊಳಿಸಲು ಸಿಎಂ ಸೂಚನೆ ಮೇರೆಗೆ ಕಮಲ್ ಪಂತ್ ನಗರದ ಎಲ್ಲಾ ಡಿಸಿಪಿಗಳಿಗೆ ಬ್ರೇಕ್ ಹಾಕುವಂತೆ ತಾಕೀತು ಮಾಡಿದ್ದಾರೆ. ಇಂದಿನಿಂದ ಬಹುತೇಕ ಒಳ ರಸ್ತೆಗಳು ಬಂದ್ ಆಗುವ ಸಾಧ್ಯತೆಯಿದೆ. ಅಗತ್ಯ ಸೇವೆ ಹೊರತುಪಡಿಸಿ ತುರ್ತು ಸೇವೆಗೆ ಮಾತ್ರ ಅವಕಾಶವಿರಲಿದ್ದು ಕಾರಣ ಹೇಳಿ ಓಡಾಡುವವರ ಬಗ್ಗೆ ಮತ್ತಷ್ಟು ತೀವ್ರ ನಿಗಾ ವಹಿಸಲು ಸೂಚನೆ ನೀಡಲಾಗಿದೆ.
ಸುಖಾಸುಮ್ಮನೆ ಓಡಾಡುವವರ ದಾಖಲೆಗಳ ಸಂಪೂರ್ಣ ಪರಿಶೀಲಿಸುವಂತೆ ತಿಳಿಸಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯ ಪರಿಶೀಲನೆ ಮಾಡಬೇಕು. ಖುದ್ದು ಆಯಾ ವ್ಯಾಪ್ತಿಯ ಡಿಸಿಪಿಗಳು ಫೀಲ್ಡ್ ಗೆ ಇಳಿಯುವಂತೆ ಉಸ್ತುವಾರಿ ನೋಡಿಕೊಳ್ಳಬೇಕು.ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿಸಬೇಕು. ಕಮಿಷನರ್ ಸೂಚನೆ ಮೇರೆಗೆ ಮತ್ತಷ್ಟು ಬಿಗಿ ಪೊಲೀಸ್ ಕಣ್ಗಾವಲು ಇರಲಿದೆ.
ಕಟ್ಟಡ ನಿರ್ಮಾಣದ ಸಾಮಾಗ್ರಿಗಳಿಗೆ ಬೆಳಗಿನ ವೇಳೆ ನಿರ್ಬಂಧ ವಿಧಿಸಲು ಮುಂದಾಗಿರುವ ನಗರ ಪೊಲೀಸರು ಸಂಜೆ 6ರಿಂದ ಬೆಳ್ಳಗೆ 6 ಗಂಟೆವರೆಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ. ಆರರ ನಂತರ ಸಂಪೂರ್ಣ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸಾಮಗ್ರಿಗಳ ಹೊತ್ತೊಯ್ಯುವ ಲಾರಿ, ಟೆಂಪೋ, ಆಟೊಗಳಿಗೆ ಓಡಾಡಲು ಅವಕಾಶ ನೀಡಕೂಡದು ಎಲ್ಲಾ ವಲಯದ ಡಿಸಿಪಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.