ಕರ್ನಾಟಕ

karnataka

ETV Bharat / state

ಪೊಲೀಸರು ಸುಖಾಸುಮ್ಮನೆ ಮನಬಂದಂತೆ‌ ಥಳಿಸಿದ್ದಾರೆ : ಖಾಸಗಿ ಆಸ್ಪತ್ರೆ ವೈದ್ಯನಿಂದ ಆರೋಪ - Remdcivir

ನನಗೂ ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡಿದವರಿಗೂ ಸಂಬಂಧ ಇಲ್ಲ. ಸುಖಾಸುಮ್ಮನೆ ನನ್ನನ್ನು ಕರೆಸಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧ ನಾಗರಾಜ್​ ಆಪಾದಿಸಿದ್ದಾರೆ..

accusations-from-a-private-hospital-doctor
ಖಾಸಗಿ ಆಸ್ಪತ್ರೆ ವೈದ್ಯನಿಂದ ಆರೋಪ

By

Published : May 17, 2021, 3:42 PM IST

Updated : May 19, 2021, 5:28 PM IST

ಬೆಂಗಳೂರು :ಕೊರೊನಾ‌ ಜೀವರಕ್ಷಕ ಎನ್ನಲಾಗುವ ರೆಮ್ಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡಿರುವುದಾಗಿ ಶಂಕಿಸಿ ಸುಖಾಸುಮ್ಮನೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವೈದ್ಯ ನಾಗರಾಜ್ ಎಂಬುವರು ಸಂಜಯ್ ನಗರ ಪೊಲೀಸರ ವಿರುದ್ಧ ಆರೋಪಿಸಿದ್ದಾರೆ.

ಈ ಬಗ್ಗೆ ವಿಡಿಯೋ ಮಾಡಿರುವ ಕೆಲ ದಿನಗಳ ಹಿಂದಷ್ಟೇ ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ ಹಾಗೂ ನಕಲಿ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ಆರೋಪದಡಿ ಖಾಸಗಿ ಆಸ್ಪತ್ರೆ ವೈದ್ಯ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು‌‌.

ಖಾಸಗಿ ಆಸ್ಪತ್ರೆ ವೈದ್ಯನಿಂದ ಆರೋಪ

ಇದೇ ತಿಂಗಳ 15ರಂದು ನನ್ನ ಸ್ಟೇಷನ್​ಗೆ ಕರೆದುಕೊಂಡು ಹೋಗಿ ನಿನ್ನೆ ಬಿಟ್ಟಿದ್ದಾರೆ. ನನಗೂ ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡಿದವರಿಗೂ ಸಂಬಂಧ ಇಲ್ಲ. ಸುಖಾಸುಮ್ಮನೆ ನನ್ನನ್ನು ಕರೆಸಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧ ನಾಗರಾಜ್​ ಆಪಾದಿಸಿದ್ದಾರೆ.

ಹೆಚ್ಚಿನ ಓದಿಗೆ:ವೈದ್ಯರ ಮೇಲೆ ಹಲ್ಲೆ ಪ್ರಕರಣ: ಇನ್ಸ್​ಪೆಕ್ಟರ್​ ಸೇರಿ ಮೂವರು ಸಸ್ಪೆಂಡ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಜಯ್ ನಗರ ಠಾಣೆಯ ಇನ್ಸ್​ಸ್ಪೆಕ್ಟರ್ ಈ ಜಾಲದಲ್ಲಿ‌ ಈಗಾಗಲೇ ಕೆಲ ಆಸ್ಪತ್ರೆಯ ವೈದ್ಯರಿಗೆ ನೊಟೀಸ್ ನೀಡಲಾಗಿದೆ‌. ಅನವಶ್ಯಕವಾಗಿ ಯಾರನ್ನು ಹೊಡೆದಿಲ್ಲ. ವೈದ್ಯ ನಾಗರಾಜ್ ಆರೋಪ ನಿರಾಧಾರ. ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

Last Updated : May 19, 2021, 5:28 PM IST

ABOUT THE AUTHOR

...view details