ಕರ್ನಾಟಕ

karnataka

By

Published : Dec 5, 2021, 4:51 PM IST

Updated : Dec 5, 2021, 5:29 PM IST

ETV Bharat / state

ಮೀಸೆ ಚಿಗುರದ ಹುಡುಗರಿಂದ ಗಾಂಜಾ ಮತ್ತಲ್ಲಿ ಹಣಕ್ಕಾಗಿ ಕ್ರೈಂ : 6 ಬಾಲಕರು ವಶಕ್ಕೆ

ಓದುವ ವಯಸ್ಸಲ್ಲಿ ಗಾಂಜಾ ಗೀಳಿಗೆ ಬಿದ್ದ ಬಾಲಕರು,ಗಾಂಜಾ ಖರೀದಿಸಿಕೊಳ್ಳಲು ಹಣ ಇಲ್ಲದಿದ್ದಾಗ ಮನೆ ಮೇಲೆ ಕಲ್ಲು ತೂರುವುದು ಜತೆಗೆ ರಾಬರಿ ಮಾಡುತ್ತಿದ್ದವರನ್ನ ಪೊಲೀಸರು ವಶಕ್ಕೆ ಪಡರದುಕೊಂಡು ಬಾಲಮಂದಿರಕ್ಕೆ ಕಳಿಸಿದ್ದಾರೆ..

ಗಾಂಜಾ ಮತ್ತಲ್ಲಿ ಹಣಕ್ಕಾಗಿ ಕ್ರೈಂ
ಗಾಂಜಾ ಮತ್ತಲ್ಲಿ ಹಣಕ್ಕಾಗಿ ಕ್ರೈಂ

ಬೆಂಗಳೂರು :ನಗರದಲ್ಲಿ ಮೀಸೆ ಚಿಗುರದ ಹುಡುಗರ ಪುಂಡಾಟ ಅಷ್ಟಿಷ್ಟಲ್ಲ. ಮನೆಗೆ ಕಲ್ಲು ಹೊಡಿದು ದಾಂಧಲೆ ಮಾಡುತ್ತಾರೆ. ಬೈಕ್‌ನಲ್ಲಿ ಬಂದವನ ಬೆನ್ನು ಬೀಳುತ್ತಾರೆ‌. ನಿಂತ ವೃದ್ಧನಿಗೆ ಲಾಂಗ್ ಬೀಸ್ತಾರೆ‌. ಜೇಬಲ್ಲಿದ್ದ ದುಡ್ಡು ಕಿತ್ತು ಪರಾರಿಯಾಗ್ತಾರೆ. ಗಾಂಜಾ ಮತ್ತಲ್ಲಿ ಇಷ್ಟೆಲ್ಲ ಕ್ರೌರ್ಯ ಮೆರೆದಿದ್ದ ಹುಡುಗರ ಗ್ಯಾಂಗ್ ಸದ್ಯ ಅಂದರ್ ಆಗಿದೆ.

ಮನೆ ಮೇಲೆ ಕಲ್ಲು ಬಿಸಾಕಿ ಪುಂಡಾಟ. ಬೈಕ್‌ನಲ್ಲಿ ಬರ್ತಿದ್ದವನ ಬೈಕ್ ತಡೆದು ರಾಬರಿಗೆ ಯತ್ನ. ರಾತ್ರಿ ಹೊತ್ತು ನಿಲ್ಲಿಸಲಾಗಿದ್ದ ಬೈಕ್ ಎಗರಿಸುವ ಸ್ಕೆಚ್. ಹೀಗೆ ಗುಂಪು ಗುಂಪಾಗಿ ನಿರ್ಮಾಣ ಹಂತದ ಕಟ್ಟಡಕ್ಕೆ ನುಗ್ಗಿ ದಾಂಧಲೆ. ವೃದ್ಧನಿಗೆ ಲಾಂಗ್ ಬೀಸಿ ಜೇಬ್​​ನಲ್ಲಿದ್ದ ದುಡ್ಡು ಕಿತ್ತು ಪರಾರಿ. ಇಷ್ಟೆಲ್ಲಾ ದೃಶ್ಯ ಕಂಡು ಬಂದಿದ್ದು ಬೇರೆಲ್ಲೂ ಅಲ್ಲ. ಬೆಂಗಳೂರಿನ ಜೀವನಹಳ್ಳಿಯಲ್ಲಿ.

ಗಾಂಜಾ ಮತ್ತಲ್ಲಿ ಹಣಕ್ಕಾಗಿ ಕ್ರೈಂ

ಗಾಂಜಾ ಮತ್ತಲ್ಲಿ ಹಣಕ್ಕಾಗಿ ಕ್ರೈಂ :ಹೀಗೆ ಹುಚ್ಚಾಟ ಮೆರೆದಿರುವುದು ಯಾವುದೋ‌ ರೌಡಿಗಳಲ್ಲ. ಇನ್ನೂ ಮೀಸೆ ಚಿಗುರದ ಹುಡುಗರು. ಓದುವ ವಯಸ್ಸಲ್ಲಿ ಗಾಂಜಾ ಗೀಳಿಗೆ ಬಿದ್ದವರು. ಗಾಂಜಾ ಖರೀದಿಸಿಕೊಳ್ಳಲು ಹಣ ಇಲ್ಲದಿದ್ದಾಗ ಹೆದರಿಸಿ ಬೆದರಿಸಿ ಹಣ ಕಿತ್ತುಕೊಳ್ಳುತ್ತಾರೆ. ಮತ್ತಲ್ಲಿ ಸುಖಾ ಸುಮ್ಮನೆ ಕಂಡ ಕಂಡ ಮನೆಗಳ ಮೇಲೆ ಕಲ್ಲು ಎಸೆಯುತ್ತಾರೆ. ಬೈಕ್‌ನಲ್ಲಿ ಬಂದವರನ್ನು ಅಡ್ಡಗಟ್ಟಿ ರಾಬರಿ ಮಾಡ್ತಾರೆ. ಈ ದೃಶ್ಯ ಕಂಡು ರಾತ್ರಿ ಹೊತ್ತು‌ ಏರಿಯಾದ ಜನ ಹೊರ ಬರುವುದಕ್ಕೂ ಹೆದರುವಂತಹ ಪರಿಸ್ಥಿತಿ ಸದ್ಯ ನಿರ್ಮಾಣ ಆಗಿದೆ‌.

ಲಾಂಗ್ ಬೀಸಿ ವೃದ್ಧನ ಜೀಬಿನಿಂದ ಹಣ ಕಿತ್ತು ಪರಾರಿ :ಒಂದು ವಾರದ ಹಿಂದೆ ಬೆಳಗಿನ‌ ಜಾವ 5.30ರ ಸುಮಾರಿಗೆ ಇದೇ ಜೀವನಹಳ್ಳಿಯಲ್ಲಿ ನಡೆದ ಘಟನೆ. ಸೂರ್ಯ ಹುಟ್ಟೋಕು ಮುಂಚೆಯೇ ಹೊಂಚು ಹಾಕಿ ಕುಳಿತಿದ್ದ ದರೋಡೆಕೋರರ ಗ್ಯಾಂಗ್ ವೃದ್ಧ ಕಾಣುತ್ತಿದ್ದಂತೆ ಆತನ ಮೇಲೆ ಎರಗಲು ಮುಂದಾಗುತ್ತಾರೆ.

ಜೇಬಿಗೆ ಕೈ ಹಾಕಿ ಹಣ ಎತ್ತಿಕೊಳ್ಳಲು ಮುಂದಾಗ್ತಾರೆ. ಪ್ರತಿರೋಧಿಸಿದಾಗ ಲಾಂಗ್ ಬೀಸಿ ಹುಚ್ಚಾಟ ಮೆರೆದಿದ್ದಾರೆ. ವೃದ್ದ ಸಿಡಿದು ನಿಂತಾಗ ಕೊನೆಗೆ ಜೇಬಿನಿಂದ ಕೆಳಗೆ ಬಿದ್ದ ಹಣ ಎತ್ತಿಕೊಂಡು ಪರಾರಿಯಾಗಿದ್ದರು. ಈ ಮೀಸೆ ಚಿಗುರದ ಹುಡಗರ ಪುಂಡಾಟ ಇಷ್ಟೇ ಅಲ್ಲ. ಮತ್ತೋರ್ವ ಹುಡುಗನ ಅಟ್ಟಾಡಿಸಿಕೊಂಡು ಬಂದು ಹಲ್ಲೆಗೆ ಮುಂದಾಗ್ತಾರೆ.

ಆತ ಈ‌ ನಿರ್ಮಾಣ ಹಂತದ ಕಟ್ಟಡದ ಒಳಗೆ ಹೋಗುತ್ತಿದ್ದಂತೆ ಕಲ್ಲು, ದೊಣ್ಣೆ ಎಸೆದು ಕ್ರೌರ್ಯ ಮೆರಿದಿದ್ದಾರೆ‌. ಸದ್ಯ ಇಷ್ಟೆಲ್ಲ ಹುಚ್ಚಾಟ ಮಾಡ್ತಿದ್ದ ಗ್ಯಾಂಗ್​​​ನ ಮೂವರು, ಕಾನೂನು ಸಂಘರ್ಷಕ್ಕೆ‌ ಒಳಗಾದ ಮೂವರನ್ನು ಪುಲಕೇಶಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ಬಾಲಮಂದಿರಕ್ಕೆ ಕಳಿಸಿದ್ದಾರೆ.

Last Updated : Dec 5, 2021, 5:29 PM IST

ABOUT THE AUTHOR

...view details