ಬೆಂಗಳೂರು:ಪಾದರಾಯನಪುರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಇಂದು ಸೀಲ್ಡೌನ್ ಆದ ವಲಯಗಳಲ್ಲಿ ಸಾಕಷ್ಟು ಪೊಲೀಸ್ ಭದ್ರತೆ ವಹಿಸಲಾಗಿತ್ತು.
ಪಾದರಾಯನಪುರ ಗಲ್ಲಿ ಗಲ್ಲಿ ರೌಂಡ್ಸ್ ಹಾಕಿದ ಗರುಡ ಪಡೆ
ಬೆಂಗಳೂರಿನ ಪಾದರಾಯಪುರದ ಸೀಲ್ಡೌನ್ ಆದ ವಲಯಗಳಲ್ಲಿ ಇಂದು ಪೊಲೀಸ್ ಇಲಾಖೆಯ ಗರುಡ ಪಡೆ ರೌಂಡ್ಸ್ ಹಾಕುತ್ತಿದೆ.
ಕೊರೊನಾ ನಿಯಂತ್ರಣ ಮಾಡಲು ಸರ್ಕಾರ ಇಂದು ಕರ್ಫ್ಯೂ ಜಾರಿ ಮಾಡಿದೆ. ರಸ್ತೆಯಲ್ಲಿ ಅನಗತ್ಯವಾಗಿ ಓಡಾಟ ನಡೆಸುವವರ ಮೇಲೆ ತೀವ್ರ ನಿಗಾ ವಹಿಸುವ ನಿಟ್ಟಿನಲ್ಲಿಂದು ಪೊಲೀಸ್ ಇಲಾಖೆಯ ಗರುಡ ಪಡೆ ಪಾದರಾಯನಪುರದಲ್ಲಿ ರೌಂಡ್ಸ್ ಹಾಕುತ್ತಿದೆ. ಸುಖಾಸುಮ್ಮನೆ ರಸ್ತೆಯಗಿಳಿಯುವ ಜನರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.
ಈವರೆಗೆ ಪಾದರಾಯಪುರದಲ್ಲಿ ಸುಮಾರು 60 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಗರುಡ ಪಡೆಯ ಜೊತೆಗೆ ಪೊಲೀಸರು ಜಾಗೃತಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇಂದು ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಸಂಭ್ರಮದಲ್ಲಿದ್ದು, ಮನೆಯಲ್ಲೇ ಕೊರೊನಾ ಆತಂಕದ ಜೊತೆ ಜೊತೆಗೆ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ.