ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಲ ಬಿಚ್ಚಿದ್ದ ರೌಡಿ ಭರತನನ್ನು ಉತ್ತರ ವಿಭಾಗ ಪೊಲೀಸರು ಇಂದು ಬೇಟೆಯಾಡಿದ್ದಾರೆ. ಸದ್ಯ ಆತನ ಸಹಚರರನ್ನ ಹಿಡಿಯಲು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಸ್ವತಃ ತಾವೇ ಕಾರ್ಯಾಚರಣೆಗೆ ಇಳಿದಿದ್ದಾರೆ.
ಸ್ಲಂ ಭರತನ ಸಹಚರರಲ್ಲಿ ಆ್ಯಕ್ಟಿವ್ ಮತ್ತು ನಾನ್ ಆ್ಯಕ್ಟಿವ್ ಆಗಿರುವವರನ್ನು ಪ್ರತ್ಯೇಕ ಪಟ್ಟಿ ಮಾಡಿ 50ಕ್ಕೂ ಹೆಚ್ಚು ರೌಡಿಗಳನ್ನು ವಶಕ್ಕೆ ಪಡೆದು ಬಾಗಲಗುಂಟೆ ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ.
ಸ್ಲಂ ಭರತನ 50 ಕ್ಕೂ ಹೆಚ್ಚು ಸಹಚರರು ಪೊಲೀಸ್ ವಶಕ್ಕೆ ಸದ್ಯ ಸಪ್ತಗಿರಿ ಆಸ್ಪತ್ರೆ ಬಳಿ ಭರತನ ಮೃತದೇಹ ಇದ್ದು, ಆತನ ಸಹಚರರು ಭರತನ ಮೃತದೇಹ ನೋಡಲು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಅಲರ್ಟ್ ಆಗಿ ಸ್ಥಳಕ್ಕೆ ಭೇಟಿ ನೀಡಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಅವರು ಪ್ರತಿಯೊಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಸ್ಲಂ ಭರತ ಬೆಂಗಳೂರಲ್ಲಿ ಹೀರೋ ಆಗಲು ಹೊರಟು ಹಲವು ಪುಡಾರಿಗಳನ್ನ ತನ್ನ ಸಹಚರರನ್ನಾಗಿ ಇಟ್ಟುಕೊಂಡಿದ್ದ. ಹೀಗಾಗಿ ಪೊಲೀಸರು ಆತನ ಪ್ರತಿ ಸಹಚರರ ಮೇಲೆ ಕಣ್ಣಿಟ್ಟು ಚಲನವಲನಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.