ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಸೆಮಿ ಲಾಕ್​​ಡೌನ್​ ಶುರು: ಇಂದಿನಿಂದಲೇ ವ್ಯಾಪಾರ ಬಂದ್​​​, ಪೊಲೀಸರೊಂದಿಗೆ ವಾಕ್ಸಮರ - ಬೆಂಗಳೂರಿನಲ್ಲಿ ಅಂಗಡಿ-ಶಾಪ್​ ಬಂದ್​

ರಾಜ್ಯ ಸರ್ಕಾರದಿಂದ ಕೋವಿಡ್ ಸೋಂಕು ತಡೆಗೆ ಪರಿಷ್ಕೃತ ಮಾರ್ಗಸೂಚಿ ರಿಲೀಸ್ ಆಗಿದ್ದು, ಹೀಗಾಗಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ಬಂದ್ ಮಾಡಲಾಗುತ್ತಿದೆ. ಪೊಲೀಸರು ಕೆಲವೊಂದು ಅಂಗಡಿಗಳನ್ನ ಬಲವಂತವಾಗಿ ಮುಚ್ಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

police forcefully closing shopes Bengaluru
police forcefully closing shopes Bengaluru

By

Published : Apr 22, 2021, 6:27 PM IST

Updated : Apr 22, 2021, 7:14 PM IST

ಬೆಂಗಳೂರು: ಅಗತ್ಯ ಸೇವೆ ಹೊರತುಪಡಿಸಿದರೆ ಉಳಿದೆಲ್ಲ ಅಂಗಡಿ-ಮುಂಗಟ್ಟು ಬಂದ್ ಆದೇಶ ಹಿನ್ನೆಲೆಯಲ್ಲಿ ನಗರದ ಪೊಲೀಸರು ತೆರಳಿ ಬಲವಂತವಾಗಿ ಶಾಪ್​ ಮುಚ್ಚಿಸುವ ಮೂಲಕ ಸಾರ್ವಜನಿಕರಿಗೆ ಸೈಲೆ‌ಂಟ್ ಶಾಕ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸೆಮಿಲಾಕ್​​ಡೌನ್​ ಶುರು

ಏ.21 ರಿಂದ ಮೇ‌ 4ರವರೆಗೆ ನೈಟ್ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದು‌, ಈ ಅವಧಿಯಲ್ಲಿ ಅಗತ್ಯ ಸೇವೆ ಹೊರತುಪಡಿಸಿದರೆ ಉಳಿದೆಲ್ಲ ವಹಿವಾಟು ಬಂದ್ ಆಗಿರಲಿದೆ ಎಂದು ಸರ್ಕಾರ ತಿಳಿಸಿತ್ತು. ಇದರಂತೆ ಜನರ ಜೀವನ ಎಂದಿನಂತೆ ಇತ್ತು.‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮುಖ್ಯಮಂತ್ರಿ ಬಿಎಸ್​​ವೈ ಹೊರಬರುತ್ತಿದ್ದಂತೆ ಹಿರಿಯ ಅಧಿಕಾರಿಗಳನ್ನು ಕರೆಯಿಸಿಕೊಂಡು ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಅಂಗಡಿ - ಮುಂಗಟ್ಟು ಬಂದ್ ಮಾಡುವಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರ‌‌ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕಮರ್ಷಿಯಲ್ ಶಾಪ್, ಜವಳಿ ಅಂಗಡಿ, ಹೋಟೆಲ್​​ಗಳು (ಪಾರ್ಸೆಲ್ ಅವಕಾಶ) ಜ್ಯೂವೆಲ್ಲರಿ ಶಾಪ್, ಚಪ್ಪಲಿ ಶಾಪ್​ಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.

ಸಲೂನ್ ಶಾಪ್​ಗಳು, ಬ್ಯೂಟಿ ಪಾರ್ಲರ್​ಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಬಾರ್ ಹಾಗೂ ರೆಸ್ಟೋರೆಂಟ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸಿಎಂ ಆದೇಶ ಹಿನ್ನೆಲೆಯಲ್ಲಿ ಏಕಾಏಕಿ ಬಂದ್​ ಮಾಡಲು ಮುಂದಾಗಿರುವ ಕಾರಣ ಅಂಗಡಿ ಮಾಲೀಕರು, ವ್ಯಾಪಾರಸ್ಥರು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ನಮ್ಮ ಜೀವನವನ್ನೇ ಕಸಿಯುವ ಕೆಲಸ ಮಾಡುತ್ತಿದ್ದೀರಾ? ಪರಿಷ್ಕೃತ ಆದೇಶ ಪ್ರತಿ ತೋರಿಸಿ ಎಂದು ವಾಕ್ಸಮರ ನಡೆಸಿದರು.

ಕಮರ್ಷಿಯಲ್, ಪ್ರೈವೇಟ್ ಎಸ್ಟಾಬ್ಲಿಷ್​ಮೆಂಟ್ ಅವಕಾಶಗಳೇನು?

  • ದಿನಸಿ, ಹಣ್ಣು, ತರಕಾರಿ ಡೈರಿ, ಮಾಂಸ, ಪ್ರಾಣಿಗಳ ಆಹಾರ ಓಪನ್
  • ಹೋಲ್ ಸೇಲ್ ತರಕಾರಿ, ಹಣ್ಣು ಹೂವು ಅಂಗಡಿ ಓಪನ್
  • ಆದರೆ ತೆರೆದ ಜಾಗದಲ್ಲಿ ಕೊರೊನಾ ನಿಯಮಗಳ ಜತೆ ಅವಕಾಶ
  • ಹೊಟೇಲ್, ರೆಸ್ಟೋರೆಂಟ್​ಗಳಲ್ಲಿ ಪಾರ್ಸಲ್​​ಗೆ ಮಾತ್ರ ಅವಕಾಶ
  • ಹೋಟೆಲ್​​ ಲಾಡ್ಜಿಂಗ್ ಹೊರಗಿನಿಂದ ಬಂದ ಅತಿಥಿಗಳಿಗೆ ಮಾತ್ರ
  • ಮದ್ಯದಂಗಡಿಗಳಲ್ಲಿ ಕೇವಲ ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶ
  • ಆಹಾರ ತಯಾರಿಕಾ ಘಟಕಗಳಿಗೆ ಕೆಲಸ ಮಾಡಲು ಅನುಮತಿ
  • ಬ್ಯಾಂಕ್, ಎಟಿಎಂ ಇನ್ಶೂರೆನ್ಸ್ ಕಂಪನಿಗಳಿಗೆ ತೆರೆಯಲು ಅವಕಾಶ
  • ಪೇಪರ್, ಟಿವಿ, ಮೀಡಿಯಾಗಳಿಗೆ ಅವಕಾಶ
  • ಇ-ಕಾಮರ್ಸ್ ಸೇವೆಯ ಕಚೇರಿಗಳಿಗೆ ತೆರೆಯಲು ಅವಕಾಶ
  • ಶೇರ್ ಮಾರ್ಕೆಟ್​ ನಡೆಸುವ ಸೇವಾ ಕಚೇರಿಗಳಿಗೆ ಪರ್ಮಿಶನ್
  • ಕೋಲ್ಡ್ ಸ್ಟೋರೆಜ್, ವೇರ್ ಹೌಸ್ ಗಳ ತೆರೆಯಲು ಅವಕಾಶ
  • ಖಾಸಗಿ ಸೆಕ್ಯೂರಿಟಿ ಏಜೆನ್ಸಿಗಳು ತೆರೆಯಬಹುದು
  • ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್​​​ಗೂ ಅವಕಾಶ
  • ಆದರೆ ಕೊರೊನಾ ನಿಯಮಗಳ ಉಲ್ಲಂಘನೆ ಮಾಡಬಾರದು
  • ಕಟ್ಟಡ ನಿರ್ಮಾಣ ಸಾಮಗ್ರಿ ಮಾರಾಟ ಮಾಡುವ ಅಂಗಡಿಗೆ ಅನುಮತಿ
Last Updated : Apr 22, 2021, 7:14 PM IST

ABOUT THE AUTHOR

...view details