ಕರ್ನಾಟಕ

karnataka

ETV Bharat / state

ರಾಜಧಾನಿಯಲ್ಲಿ ನಟೋರಿಯಸ್ ರೌಡಿಶೀಟರ್​ಗಳ ಮೇಲೆ ಪೊಲೀಸರಿಂದ ಗುಂಡು, ಬಂಧನ - ಜಾಲಹಳ್ಳಿ ಪೊಲೀಸರು

ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿಶೀಟರ್ ವಿಜಯ್ ಹಾಗೂ ಹನುಮಂತ ಎಂಬಿಬ್ಬರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.

rowdy sheeter

By

Published : Oct 6, 2019, 10:06 AM IST

Updated : Oct 6, 2019, 12:52 PM IST

ಬೆಂಗಳೂರು :ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿಶೀಟರ್​ಗಳ ಮೇಲೆ ಜಾಲಹಳ್ಳಿ ಪೊಲೀಸರು ಗುಂಡಿನ‌ ದಾಳಿ‌ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಟೋರಿಯಸ್ ರೌಡಿಶೀಟರ್​ಗಳ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸರು

ನಂದಿನಿ ಲೇಔಟ್​ನ ಕೂಲಿ‌ ನಗರದಲ್ಲಿ ರೌಡಿಶೀಟರ್​ಗಳಾದ ವಿಜಯ್ ಹಾಗೂ ಹನುಮಂತ ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಪಡೆದ ಜಾಲಹಳ್ಳಿ ಪೊಲೀಸರು, ಸ್ಥಳಕ್ಕೆ ತೆರಳಿ ಇಬ್ಬರು ಆರೋಪಿಗಳ‌ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳು ನಡೆಸಿದ ಪ್ರತಿ ದಾಳಿಗೆ ಶ್ರೀನಿವಾಸಮೂರ್ತಿ ಹಾಗೂ ನರೇಶ್ ಕಾನ್​ಸ್ಟೆಬಲ್​ಗಳು ಗಾಯಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಗಾಯಗೊಂಡ ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್ ದಡಿಯಾ ವಿಜಯ್ ಮೇಲೆ ದರೋಡೆ, ಸರಗಳ್ಳತನ ಸೇರಿದಂತೆ ಸುಮಾರು 15 ಪ್ರಕರಣಗಳು ದಾಖಲಾಗಿವೆ. ಇನ್ನು‌ ಹನುಮಂತ ಎಂಬುವನು ಇದೇ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿದ್ದನು.

ಕಳೆದ ವಾರ ಇದೇ ಆರೋಪಿಗಳು ಸರಗಳ್ಳತನ‌ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್​ಸ್ಪೆಕ್ಟರ್ ಯಶವಂತ್ ಹಾಗೂ ಪಿಎಸ್ಐ ಲೇಪಾಕ್ಷಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

Last Updated : Oct 6, 2019, 12:52 PM IST

ABOUT THE AUTHOR

...view details