ಕರ್ನಾಟಕ

karnataka

ETV Bharat / state

ಹಲವು ಅಪರಾಧ ಪ್ರಕರಣ ಬೇಧಿಸಿದ್ದ ಪೊಲೀಸ್ ಶ್ವಾನ ಕಾವ್ಯ ಇನ್ನಿಲ್ಲ - bomb defused squad

ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ್ದ ಶ್ವಾನ ಕಾವ್ಯ ಸಾವಿಗೀಡಾಗಿದೆ.

police dog
police dog

By ETV Bharat Karnataka Team

Published : Aug 31, 2023, 10:36 PM IST

Updated : Aug 31, 2023, 11:06 PM IST

ಬೆಂಗಳೂರು: ಕಳೆದ 9 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿದ್ದು, ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ಧೈರ್ಯವಂತೆಯಾಗಿ ಗುರುತಿಸಿಕೊಂಡಿದ್ದ 'ಕಾವ್ಯ' ಹೆಸರಿನ ಶ್ವಾನ ನಿಧನವಾಗಿದೆ. ಒಂಭತ್ತುವರೆ ವರ್ಷದ ಕಾವ್ಯಗೆ ಪೊಲೀಸರು ಗೌರವ ವಂದನೆ ಸಲ್ಲಿಸಿ, ಅಂತಿಮ ಸಂಸ್ಕಾರ ನೆರವೇರಿಸಿದರು.

ಕಾವ್ಯ

2014ರಲ್ಲಿ ಜನಿಸಿದ್ದ ಶ್ವಾನ ಅದೇ ವರ್ಷ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿತ್ತು. ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದ ಗಟ್ಟಿಗಿತ್ತಿ ಕಾವ್ಯ ಪೊಲೀಸ್ ಇಲಾಖೆಯ ಬಾಂಬ್ ನಿಷ್ಕ್ರಿಯ ದಳದಲ್ಲಿ ಕರ್ತವ್ಯ ನಿರ್ವಹಿಸಿದ್ದಾಳೆ. ಹಲವು ಅಪರಾಧ ಪ್ರಕರಣಗಳನ್ನು ಬಗೆಹರಿಸಿದ್ದ ಶ್ವಾನದ ಸಾವಿಗೆ ಬೆಂಗಳೂರು ಪೊಲೀಸರು ಸಂತಾಪ ಸೂಚಿಸಿದ್ದಾರೆ.

ಕಾವ್ಯ
Last Updated : Aug 31, 2023, 11:06 PM IST

ABOUT THE AUTHOR

...view details