ಬೆಂಗಳೂರು:ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿಯಲು ಮುಂದಾದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂಗ್ಲಿಷ್ ನಾಮ ಫಲಕಗಳಿಗೆ ಮಸಿ ಬಳಿಯಲು ಮುಂದಾದ ವಾಟಾಳ್ ನಾಗರಾಜ್ - ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪೊಲೀಸ್ ವಶಕ್ಕೆ
ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿಯಲು ಮುಂದಾದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂಗ್ಲಿಷ್ ನಾಮ ಫಲಕಗಳನ್ನು ಹರಿದು ಹಾಕಿದ ಕನ್ನಡ ಪರ ಹೋರಾಟಗಾರರು
ನಗರದ ಮಂತ್ರಿಮಾಲ್ ಸೇರಿದಂತೆ ಕೆಲ ಅಂಗಡಿ ಹಾಗೂ ಮಾಲ್‌ಗಳ ಮೇಲೆ ಇಂಗ್ಲೀಷ್ ನಾಮಫಲಕಗಳಿವೆ. ಅವುಗಳನ್ನು ತೆರವುಗೊಳಿಸಲು ಬಿಬಿಎಂಪಿ ಆದೇಶ ನೀಡಿತ್ತು. ಆದರೆ ಬಿಬಿಎಂಪಿ ಆದೇಶವನ್ನು ಪಾಲಿಸದ ಕಾರಣ, ವಾಟಾಳ್ ನಾಗರಾಜ್ ಹಾಗೂ ಬೆಂಬಲಿಗರು ನಾಮಫಲಕಗಳಿಗೆ ಮಸಿ ಬಳಿಯಲು ಮುಂದಾದ್ರು. ಈ ವೇಳೆ ಜೋರಾಗಿ ಗಲಾಟೆ ನಡೆದ ಕಾರಣ, ಮಲ್ಲೇಶ್ವರ ಠಾಣೆ ಪೊಲೀಸರು ವಾಟಾಳ್ ನಾಗರಾಜ್ ಹಾಗೂ 13 ಜನ ಬೆಂಬಲಿಗರನ್ನು ವಶಕ್ಕೆ ಪಡೆದರು.