ಬೆಂಗಳೂರು: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮಹಿಳೆಯ ನೆರವಿಗೆ ಬಂದ ಕಾಂಗ್ರೆಸ್ ಕಾರ್ಯಕರ್ತ ಮೊಹಮ್ಮದ್ ನಲಪಾಡ್ ನನ್ನು ಹೈಗ್ರೌಂಡ್ ಪೊಲೀಸರು ವಶಕ್ಕೆ ಪಡೆದು ಬಳಿಕ ಠಾಣಾ ಜಾಮೀನಿನ ಮೇರೆಗೆ ಬಿಟ್ಟು ಕಳುಹಿಸಿದ್ದಾರೆ.
ವಿಧಾನಸೌಧ ಬಳಿ ಆಕ್ಸಿಜನ್ ಇಲ್ಲದೆ ಆ್ಯಂಬುಲೆನ್ಸ್ನಲ್ಲಿ ಸೋಂಕಿತೆ ಬಳಲುತ್ತಿದ್ದಳು. ಬಳಿಕ ಆಕೆಯ ಕುಟುಂಬಸ್ಥರು ಕಾಂಗ್ರೆಸ್ ಕೇರ್ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಇದರಂತೆ ಸ್ಥಳಕ್ಕೆ ಆ್ಯಂಬುಲೆನ್ಸ್ ಜೊತೆಗೆ ನಲಪಾಡ್ ಸಹಚರರು ಬಂದಿದ್ದರು.
ಕಾಂಗ್ರೆಸ್ ಕೇರ್ ಆ್ಯಂಬುಲೆನ್ಸ್ಗೆ ಸೋಂಕಿತೆಯನ್ನ ಶಿಫ್ಟ್ ಮಾಡುವ ಸಂದರ್ಭದಲ್ಲಿ ಸರ್ಕಾರಿ ಆ್ಯಂಬುಲೆನ್ಸ್ ಸಹ ಜಾಗಕ್ಕೆ ಬಂದಿದೆ. ಹೀಗಾಗಿ ಸ್ಥಳದಲ್ಲಿ ಜನಸಂದಣಿ ಹೆಚ್ಚಾಗಿದ್ದು, ಕೊನೆಯದಾಗಿ ಸೋಂಕಿತೆಯನ್ನ ಕಾಂಗ್ರೆಸ್ ಕೇರ್ ಆ್ಯಂಬುಲೆನ್ಸ್ಗೆ ಶಿಫ್ಟ್ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸುವ ಕಾರ್ಯ ಮಾಡಲಾಗುತ್ತಿತ್ತು. ಈ ವೇಳೆ, ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನ ನಿಯಂತ್ರಿಸಿದಲ್ಲದೇ ಕಾಂಗ್ರೆಸ್ ಕಾರ್ಯಕರ್ತ ನಲಪಾಡ್ ಅವರನ್ನು ತರಾಟೆಗೆ ತೆದುಕೊಂಡರು.