ಕರ್ನಾಟಕ

karnataka

ETV Bharat / state

ಸಂಜನಾ  ಸೆಲ್ಫಿ ವಿಡಿಯೋ ಪ್ರಕರಣ: ಸ್ವಯಂ ಪ್ರೇರಿತ‌ ದೂರು ದಾಖಲಿಸಲು ಪೊಲೀಸರ ನಿರ್ಧಾರ - ಡ್ರೈವಿಂಗ್​​ನಲ್ಲಿ ಮೊಬೈಲ್ ಬಳಸಿ ಸಿಕ್ಕಿ

ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತ ಸೆಲ್ಫಿ ವಿಡಿಯೋ ಮಾಡಿರುವ ನಟಿ ಸಂಜನಾ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲು ಟ್ರಾಫಿಕ್​ ಪೊಲೀಸರು ನಿರ್ಧಾರ ಮಾಡಿದ್ದಾರೆ.

Police decide to Self-Reporting Complaint
ಸೆಲ್ಫಿ ವಿಡಿಯೋ ಮಾಡಿರೋ ಸಂಜನಾ

By

Published : Jan 13, 2020, 11:54 AM IST

ಬೆಂಗಳೂರು:ಇತ್ತೀಚೆಗಷ್ಟೇ ಪಬ್​​ನಲ್ಲಿ ಗಲಾಟೆ ಮಾಡಿ ಸುದ್ದಿಯಾಗಿದ್ದ ನಟಿ ಸಂಜನಾ, ಇದೀಗ ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಾ ಸೆಲ್ಫಿ ವಿಡಿಯೋ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ತೆಲುಗು ನಟ ಮಹೇಶ್ ಬಾಬು ಸಿನಿಮಾ ವೀಕ್ಷಣೆಗೆ ತೆರಳುತ್ತಿದಾಗ ಅವರೇ ಸ್ವತಃ ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ, ಕೆಂಪೇಗೌಡ ರಸ್ತೆಯ ಬಳಿ ತೆರಳುತ್ತಿದ್ದಾಗ ಸೆಲ್ಫಿ ವಿಡಿಯೋ ಮಾಡುತ್ತಾ, ಎದೆ ಡಗ್ ಡಗ್ ಹಾಕ್ತಿದೆ ಎಂದು‌ ಹೇಳಿ ಸಂಜನಾ ಜೋಷ್​​ನಲ್ಲಿ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

ಸೆಲ್ಫಿ ವಿಡಿಯೋ ಮಾಡಿರೋ ಸಂಜನಾ

ಡ್ರೈವಿಂಗ್​​ನಲ್ಲಿ ಮೊಬೈಲ್ ಬಳಸಿದ್ರೇ ಟ್ರಾಫಿಕ್ ಪೊಲೀಸರು ದಂಡ ಹಾಕ್ತರೆ. ಮೊದಲ ಬಾರಿಗೆ ಡ್ರೈವಿಂಗ್​​ನಲ್ಲಿ ಮೊಬೈಲ್ ಬಳಸಿ ಸಿಕ್ಕಿ ಬಿದ್ರೇ 1000 ಸಾವಿರ ರೂ. ದಂಡ. 2 ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿ ಬಿದ್ರೇ 2000 ಸಾವಿರ ರೂ. ಮೂರನೇ ಬಾರಿ ಸಿಕ್ಕಿ ಬಿದ್ರೇ ಡಿಎಲ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸು ಮಾಡ್ತಾರೆ. ಸದ್ಯ ಸಂಜನಾ ಮೇಲೆ ಟ್ರಾಫಿಕ್ ಪೊಲೀಸರು ದಂಡ ಹಾಕಲು ನಿರ್ಧಾರ ಮಾಡಿದ್ದಾರೆ.

ABOUT THE AUTHOR

...view details