ಕರ್ನಾಟಕ

karnataka

ETV Bharat / state

ಇಂದು ಸಂಜನಾ ಪೊಲೀಸ್ ಕಸ್ಟಡಿ ಅಂತ್ಯ... ಜೈಲಾ-ಬೇಲಾ? - ಸಂಜನಾ ಗಲ್ರಾನಿಯ ಪೊಲೀಸ್ ಕಸ್ಟಡಿ ಅವಧಿ

ಸ್ಯಾಂಡಲ್​ವುಡ್​​ ಡ್ರಗ್ಸ್​​ ನಂಟು ಆರೋಪ ಪ್ರಕರಣದಡಿ 11 ದಿನಗಳ ಪೊಲೀಸ್ ಕಸ್ಟಡಿ ಮುಗಿಸಿರುವ ನಟಿ ಸಂಜನಾ ಗಲ್ರಾನಿಯನ್ನು ಇಂದು ಮಧ್ಯಾಹ್ನದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.

police custody of Sanjana galrani will be ended today?
ಪೊಲೀಸ್ ಕಸ್ಟಡಿ ಅಂತ್ಯ...ಜೈಲು ಸೇರ್ತಾರ ಸಂಜನಾ ?

By

Published : Sep 16, 2020, 8:19 AM IST

ಬೆಂಗಳೂರು:ಸ್ಯಾಂಡಲ್​ವುಡ್​​ ಡ್ರಗ್ಸ್​​ ನಂಟು ಆರೋಪ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ನಟಿ ಸಂಜನಾ ಗಲ್ರಾನಿಯ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗಲಿದೆ.

ಈಗಾಗಲೇ 11 ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾಗಿರುವ ಕಾರಣ ಸಂಜನಾಳನ್ನು ಇಂದು ಮಧ್ಯಾಹ್ನದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ‌ಸಂಜನಾ ಸೇರಿದಂತೆ ಆರೋಪಿ ರವಿಶಂಕರ್ ಹಾಗೂ ವಿರೇನ್ ಖನ್ನಾ ಸಹ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ.

ಬಹುತೇಕ ಸಂಜೆಯ ಬಳಿಕ ಮೂವರು ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆಯಿದೆ. ಅದ್ರೆ ನ್ಯಾಯಾಂಗ ಬಂಧನದಿಂದ ತಪ್ಪಿಸಿಕೊಳ್ಳಲು ಸಂಜನಾ ಗಲ್ರಾನಿ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.‌ ನಿನ್ನೆ ತಮ್ಮ ವಕೀಲರ ಬಳಿ ಚರ್ಚೆ ನಡೆಸಿದ್ದಾರೆ.

ಮತ್ತೊಂದೆಡೆ ರಾಗಿಣಿ ಜಾಮೀನು ಅರ್ಜಿ ವಿಚಾರಣೆ‌ ಸಿಟಿ ಸಿವಿಲ್ ಕೋರ್ಟ್ ಹಾಲ್ 33ರಲ್ಲಿ ನಡೆಯಲಿದೆ. ಜಾಮೀನು ಸಿಕ್ಕರೆ ಇಂದೇ ಜೈಲಿನಿಂದ ರಾಗಿಣಿ ಹೊರಗಡೆ ಬರಲಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಜಾಮೀನು ಸಿಗುವುದು ಅನುಮಾನ. ಒಂದು ವೇಳೆ ಜಾಮೀನು ತಿರಸ್ಕಾರ ಆದ್ರೆ ಹೈಕೋರ್ಟ್​​​ನಲ್ಲಿ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬೇಕಾಗುತ್ತದೆ.

ABOUT THE AUTHOR

...view details