ಕರ್ನಾಟಕ

karnataka

ETV Bharat / state

Watch: ಹಾಡಿನ ಮೂಲಕ ಸಂಚಾರ ನಿಯಮ ಜಾಗೃತಿ ಮೂಡಿಸಿದ ಪೇದೆ - SP ravi channavar

ಕಾನ್ಸ್​ಸ್ಟೇಬಲ್ ಮೌಲಾಲಿ ಆಲಗೂರ ಅವರ ಹಾಡನ್ನು ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿಚನ್ನಣ್ಣನವರ್, ನಿರ್ದೇಶಕ ಯೋಗರಾಜ್ ಭಟ್ ಮುಕ್ತ ಕಂಠದಿಂದ ಶಾಘ್ಲಿಸಿದ್ದಾರೆ. ಅಲ್ಲದೆ,  ಟ್ರಾಫಿಕ್ ಸಾಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, 5 ಸಾವಿರ ರೂ.ನಗದು ಬಹುಮಾನ ಘೋಷಿಸಿದ್ದಾರೆ.

ಹಾಡಿನ ಮೂಲಕ ಸಂಚಾರ ನಿಯಮ ಜಾಗೃತಿ ಮೂಡಿಸಿದ ಪೇದೆ

By

Published : Sep 28, 2019, 8:12 PM IST

ಬೆಂಗಳೂರು: ಸರಗಳ್ಳತನ, ಡ್ರಗ್ಸ್ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಿದ್ದ ಪೊಲೀಸರು, ಇದೀಗ ಸಂಚಾರ ನಿಯಮದ ಬಗ್ಗೆ ಹಾಡಿನ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಕಾನ್ಸ್​ಸ್ಟೇಬಲ್ ಮೌಲಾಲಿ ಆಲಗೂರ ಅವರ ಹಾಡನ್ನು ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿಚನ್ನಣ್ಣನವರ್, ನಿರ್ದೇಶಕ ಯೋಗರಾಜ್ ಭಟ್ ಮುಕ್ತ ಕಂಠದಿಂದ ಶಾಘ್ಲಿಸಿದ್ದಾರೆ. ಅಲ್ಲದೆ, ಟ್ರಾಫಿಕ್ ಸಾಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, 5 ಸಾವಿರ ರೂ.ನಗದು ಬಹುಮಾನ ಘೋಷಿಸಿದ್ದಾರೆ.

ಈ ಹಿಂದೆ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯ ಕಾನ್ಸ್​ಸ್ಟೇಬಲ್ ಸುಬ್ರಮಣ್ಯ ಶಾನಬೋಗ ಎಂಬುವರು ಸರಗಳ್ಳತನ, ಡ್ರಗ್ಸ್ ನಿಯಂತ್ರಣ, ಮಹಿಳೆ ಹಾಗೂ ಮಕ್ಕಳ ಮೇಲೆ ಶೋಷಣೆ ಬಗ್ಗೆ ಸಾಹಿತ್ಯ ರಚಿಸಿ ವಿಡಿಯೊ ಆಲ್ಬಂ ಮಾಡಿದ್ದರು. ಇದಾದ ಬಳಿಕ ಕರ್ನಾಟಕ ರಾಜ್ಯ ಶ್ವಾನ ವಿಭಾಗದ ಕಾನ್ಸ್​ಸ್ಟೇಬಲ್ ಮೌಲಾಲಿ ಆಲಗೂರ ಎಂಬುವರು ಸಂಚಾರಿ ನಿಯಮ ಪಾಲಿಸುವಂತೆ ಹಾಗೂ ಉಲ್ಲಂಘನೆಯಿಂದ ಆಗಬಹುದಾದ ನಷ್ಟದ ಬಗ್ಗೆ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಸಾಹಿತ್ಯ ರಚಿಸಿದ್ದಾರೆ. ಈ ಹಾಡಿಗೆ ನವೀನ್ ರಂಜುಲಗಿ ಎಂಬುವರು ದನಿಯಾಗಿದ್ದಾರೆ.‌

ABOUT THE AUTHOR

...view details