ಬೆಂಗಳೂರು: ಬೆಳ್ಳಂಬೆಳಗ್ಗೆ ಅನಗತ್ಯ ಓಡಾಟ ನಡೆಸಿದ ವಾಹನ ಸವಾರರಿಗೆ ನಗರ ಪೊಲೀಸ್ ಆಯುಕ್ತರು ಬಿಸಿ ಮುಟ್ಟಿಸಿದ್ದಾರೆ.
ಬೆಳ್ಳಂಬೆಳಗ್ಗೆ ಫೀಲ್ಡ್ಗಿಳಿದ ಪೊಲೀಸ್ ಆಯುಕ್ತರು.. ಬೇಕಾಬಿಟ್ಟಿ ವಾಹನಗಳು ಸೀಜ್ - ಬೆಂಗಳೂರು ಸುದ್ದಿ
ಟೌನ್‌ಹಾಲ್ ಬಳಿ ಪಾಸ್ ಇರದೆ ವಾಹನಗಳು ಬೇಕಾಬಿಟ್ಟಿ ಓಡಾಟ ಮಾಡ್ತಿದ್ದವು. ಹೀಗಾಗಿ ಆಯುಕ್ತರು ಹಾಗೂ ಇತರೆ ಪೊಲೀಸರು ವಾಹನಗಳನ್ನ ನಿಲ್ಲಿಸಿ ಸೀಜ್ ಮಾಡಿದ್ದಾರೆ.

ನಿನ್ನೆ ತಾನೆ ಕೇಂದ್ರ ಸರ್ಕಾರದ ಎನ್ಡಿಎಂಎ ಕಾಯ್ದೆ ಅಡಿ (ರಾಷ್ಟ್ರೀಯ ವಿಪತ್ತು ವ್ಯವಸ್ಥಾಪಕ ಪ್ರಾಧಿಕಾರ) ವಾಹನ ಸೀಜ್ ಮಾಡಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಸಿದ್ದರು. ಇಂದು ಭಾಸ್ಕರ್ ರಾವ್ ಅವರೇ ಖುದ್ದಾಗಿ ಜಾಗಿಂಗ್ ಡ್ರೆಸ್‌ನಲ್ಲಿ ಫೀಲ್ಡ್‌ಗಿಳಿದು ಪೊಲೀಸರ ಜೊತೆ ಕಾರ್ಯಾಚರಣೆ ನಡೆಸಿದ್ದಾರೆ.
ಟೌನ್‌ಹಾಲ್ ಬಳಿ ಪಾಸ್ ಇರದೆ ವಾಹನಗಳು ಬೇಕಾಬಿಟ್ಟಿ ಓಡಾಟ ಮಾಡ್ತಿದ್ದವು. ಹೀಗಾಗಿ ಆಯುಕ್ತರು ಹಾಗೂ ಇತರೆ ಪೊಲೀಸರು ವಾಹನಗಳನ್ನ ನಿಲ್ಲಿಸಿ ಸೀಜ್ ಮಾಡಿದ್ದಾರೆ. ಹಾಗೆಯೇ ವಾಹನ ಸವಾರರಿಗೆ ದಯವಿಟ್ಟು ಮನೆಯಿಂದ ಹೊರ ಬರಲೇಬೇಡಿ ಎಂದ ಅವರು, ಪಾಸ್ ಇಲ್ಲದೆ ರಸ್ತೆಗಿಳಿಯೋ ವಾಹನಗಳನ್ನು ಏನೇ ಮಾಡಿದರೂ ನಿಷೇಧಾಜ್ಞೆ ಮುಗಿಯುವವರೆಗೂ ವಾಪಸ್ ಕೊಡಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.