ಬೆಂಗಳೂರು: ಕೊರೊನಾ ಬಿಕ್ಕಟ್ಟು ನಡುವೆಯೂ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಡ್ತಿ ನೀಡಿ ಆದೇಶ ಹೊರಡಿಸಿದೆ.
ಡಿಜಿಯಾಗಿ ಬಡ್ತಿ ಪಡೆದ ಪೊಲೀಸ್ ಕಮಿಷನರ್ ಕಮಲ್ ಪಂತ್ - kamal panth
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಕಮಲ್ ಪಂತ್ ಎಡಿಜಿಪಿಯಿಂದ ಡಿಜಿಯಾಗಿ ಬಡ್ತಿ ಪಡೆದಿದ್ದಾರೆ.
![ಡಿಜಿಯಾಗಿ ಬಡ್ತಿ ಪಡೆದ ಪೊಲೀಸ್ ಕಮಿಷನರ್ ಕಮಲ್ ಪಂತ್ Police Commissioner Kamal Pant who has been promoted DG](https://etvbharatimages.akamaized.net/etvbharat/prod-images/768-512-11586556-thumbnail-3x2-nin.jpg)
ಡಿಜಿಯಾಗಿ ಬಡ್ತಿ ಪಡೆದ ಪೊಲೀಸ್ ಕಮಿಷನರ್ ಕಮಲ್ ಪಂತ್
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಕಮಲ್ ಪಂತ್ ಎಡಿಜಿಪಿಯಿಂದ ಡಿಜಿಯಾಗಿ ಬಡ್ತಿ ಪಡೆದಿದ್ದಾರೆ. ಅದೇ ರೀತಿ ಮತ್ತೋರ್ವ ಐಪಿಎಸ್ ಅಧಿಕಾರಿ ಹಿತೇಂದ್ರ ಐಜಿಪಿಯಿಂದ ಎಡಿಜಿಪಿಯಾಗಿ ಪ್ರಮೋಷನ್ ಪಡೆದಿದ್ದಾರೆ.
ಇದುವರೆಗೂ ಎಡಿಜಿಪಿ ಸ್ಥಾನದಲ್ಲಿರುವವರನ್ನೇ ನಗರ ಪೊಲೀಸ್ ಕಮಿಷನರ್ ಆಗಿರುತ್ತಿದ್ದರು. ಆಯುಕ್ತರಾಗಿರುವ ಕಮಲ್ ಪಂತ್ ಅವರಿಗೆ ಬಡ್ತಿ ಜೊತೆ ಕಮಿಷನರ್ ಆಗಿ ಸರ್ಕಾರ ಮುಂದುವರೆಸಿರುವುದು ಇದೇ ಮೊದಲು ಎನ್ನಲಾಗಿದೆ.