ಕರ್ನಾಟಕ

karnataka

ETV Bharat / state

ನಿಷೇಧಿತ ಅವಧಿಯಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಸಿದರೆ ಕಠಿಣ ಕ್ರಮ: ಕಮಲ್‌ ಪಂತ್ ಎಚ್ಚರಿಕೆ

ನಿಯಮ ಉಲ್ಲಂಘಿಸಿದ ಧಾರ್ಮಿಕ ಕೇಂದ್ರಗಳಲ್ಲಿ ಈಗಾಗಲೇ ಮೈಕ್ ಗಳನ್ನು ಜಪ್ತಿ ಮಾಡಲಾಗಿದೆ.‌ ಒಂದು ವೇಳೆ ನಿ‌ಯಮ ಉಲ್ಲಂಘಿಸಿ ಬಾಲ ಬಿಚ್ಚಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು‌ ಎಂದು ಕಮಲ್ ಪಂತ್ ಎಚ್ಚರಿಸಿದ್ದಾರೆ.

ಕಮಲ್‌ ಪಂತ್
ಕಮಲ್‌ ಪಂತ್

By

Published : Apr 5, 2022, 3:05 PM IST

ಬೆಂಗಳೂರು:ಧಾರ್ಮಿಕ‌ ಕೇಂದ್ರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ನಿಷೇಧಿತ ಅವಧಿಯಲ್ಲಿ ಧ್ವನಿವರ್ಧಕ ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ‌ ನೀಡಿದ್ದಾರೆ. ಹೈಕೋರ್ಟ್ ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಮುಂಜಾನೆ ಹಾಗೂ ರಾತ್ರಿ ಅವಧಿಯಲ್ಲಿ ಮೈಕ್ ಬಳಸುತ್ತಿರುವ 200 ಕ್ಕಿಂತ ಹೆಚ್ಚು ಮಂದಿಗೆ ನೊಟೀಸ್ ನೀಡಲಾಗಿದೆ. ಆದಾಗ್ಯೂ ಕಾನೂನು ಉಲ್ಲಂಘಿಸುವುದು ಕಂಡು ಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ‌.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ

ಈಗಾಗಲೇ 6 ತಿಂಗಳ ಹಿಂದೆ ಹೈಕೋರ್ಟ್ ಆದೇಶಿಸಿದೆ‌. ಹೈಕೋರ್ಟ್ ನಿರ್ದೇಶನದಂತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಮಸೀದಿ, ಮಂದಿರ ಎಲ್ಲಾ ಸೇರಿದಂತೆ ನೋಟಿಸ್ ನೀಡಲಾಗಿದೆ. ಮಸೀದಿ ಮಂದಿರ ಅಲ್ಲ, ಕಾರ್ಖಾನೆಗಳಿಗೆ, ಪಬ್ ಗಳಿಗೆ ಕೂಡ ನೋಟೀಸ್ ನೀಡಿದ್ದಾರೆ. ಅಲ್ಲದೇ ಧರ್ಮ ಮುಖಂಡರ ಜೊತೆ ಸಭೆ ನಡೆಸಲಾಗಿದೆ‌.

ಅವರಿಗೂ ಮಾರ್ಗದರ್ಶನ ನೀಡಲಾಗಿದೆ. ಅದರಂತೆ ಧರ್ಮಗುರುಗಳು ನಡೆದುಕೊಂಡಿದ್ದಾರೆ. ನಿಯಮ ಉಲ್ಲಂಘಿಸಿದ ಧಾರ್ಮಿಕ ಕೇಂದ್ರಗಳಲ್ಲಿ ಈಗಾಗಲೇ ಮೈಕ್ ಗಳನ್ನು ಜಪ್ತಿ ಮಾಡಲಾಗಿದೆ.‌ ಒಂದು ವೇಳೆ, ನಿ‌ಯಮ ಉಲ್ಲಂಘಿಸಿ ಬಾಲ ಬಿಚ್ಚಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು‌ ಎಂದು ಎಚ್ಚರಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details