ಕನ್ನಡವೇ ಧನಧಾನ್ಯ, ಕನ್ನಡವೇ ಮನೆಮಾನ್ಯ.. ಬೆಂಗಳೂರು ಪೊಲೀಸರಿಂದ ರಾಜ್ಯೋತ್ಸವದ ಶುಭಾಶಯ - ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿ ಟ್ವೀಟ್
ಕನ್ನಡ ಕಲಿತು ಬಾಳೋದು ಹಿರಿಮೆ.. ಕನ್ನಡಿಗರೊಂದಿಗೆ ಬೆರೆತು ಬಾಳೋದು ಗರಿಮೆ ಎಂದು ಕನ್ನಡಿಗರಿಗೆ ಶುಭಾಶಯ ಕೋರಿದ್ದಾರೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್..
65ನೇ ಕನ್ನಡ ರಾಜ್ಯೋತ್ಸವ
ಬೆಂಗಳೂರು :65ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಇಂದು ಎಲ್ಲೆಡೆ ಕನ್ನಡದ ಕಂಪು ಹರಿದಾಡಿದೆ. ಬೆಂಗಳೂರು ಜನರನ್ನ ಕಾಯುವ ಹೊಣೆಹೊತ್ತ ಪೊಲೀಸ್ ಇಲಾಖೆ ಸಹ ರಾಜ್ಯೋತ್ಸವದ ಸಂಭ್ರಮದಲ್ಲಿ ಕನ್ನಡಿಗರಿಗೆಲ್ಲರಿಗೂ ಶುಭಾಶಯ ತಿಳಿಸಿದೆ.