ನೆಲಮಂಗಲ:ಕುಡಿದು ಹೆದ್ದಾರಿಗಳಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದರು. ಕುಡಿದು ವಾಹನ ಚಲಾಯಿಸುತ್ತಿದ್ದವರಿಗೆ ದಂಡ ಸಹ ಹಾಕಿದ್ದಾರೆ.
ಡ್ರಂಕ್ ಆ್ಯಂಡ್ ಡ್ರೈವ್ ಸವಾರರಿಗೆ ಚಳಿ ಬಿಡಿಸಿದ ನೆಲಮಂಗಲ ಪೊಲೀಸರು - undefined
ನೆಲಮಂಗಲ ಹೆದ್ದಾರಿಯಲ್ಲಿ ರಾತ್ರಿಯೆಲ್ಲ ಪೊಲೀಸರು ಆಲ್ಕೋಮೀಟರ್ ಹಿಡಿದು ಡ್ರಂಕ್ ಆ್ಯಂಡ್ ಡ್ರೈವ್ ಮಾಡುವವರ ವಿರುದ್ಧ ಕಾರ್ಯಚರಣೆ ನಡೆಸಿದರು. ಅಲ್ಲದೆ, ಮದ್ಯ ಸೇವಿಸಿದ್ದ ವಾಹನ ಸವಾರರಿಗೆ ದಂಡ ಜಡಿದು ಬುದ್ಧಿ ಕಲಿಸಿದ್ದಾರೆ.
![ಡ್ರಂಕ್ ಆ್ಯಂಡ್ ಡ್ರೈವ್ ಸವಾರರಿಗೆ ಚಳಿ ಬಿಡಿಸಿದ ನೆಲಮಂಗಲ ಪೊಲೀಸರು](https://etvbharatimages.akamaized.net/etvbharat/prod-images/768-512-3656840-thumbnail-3x2-chai.jpg)
ನೆಲಮಂಗಲ ಹೈವೇಯಲ್ಲಿ ಪೊಲೀಸರು ಆಲ್ಕೋಮೀಟರ್ ಹಿಡಿದು ರಾತ್ರಿಯಿಡೀ ಡ್ರಂಕನ್ ಡ್ರೈವರ್ಗಳನ್ನು ತಪಾಸಣೆಗೊಳಪಡಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳ ಅದೇಶದ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಹಲವೆಡೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಕುಡುಕ ವಾಹನ ಸವಾರರನ್ನ ಪತ್ತೆ ಮಾಡಲು ಆಲ್ಕೋ ಮೀಟರ್ಅನ್ನು ಬಾಯಲ್ಲಿಟ್ಟು ಊದುವಂತೆ ಹೇಳಿದರು. ಆಗ ವಾಹನ ಸವಾರರು ಕಳ್ಳಾಟ ನಡೆಸಲು ಮುಂದಾಗಿದ್ದರು. ಇಂತಹವರಿಂದಾಗಿ ಆಲ್ಕೋ ಮೀಟರ್ ಹಿಡಿದು ಪರಿಕ್ಷಿಸುವಷ್ಟರಲ್ಲಿ ಪೊಲೀಸರು ಹೈರಾಣಾದರು.
ತಪಾಸಣೆ ವೇಳೆ ಸಿಕ್ಕಿಬಿದ್ದ ಕುಡುಕ ಸವಾರರನ್ನು ಠಾಣೆಗೆ ಕರದೊಯ್ದು ದಂಡ ಕಟ್ಟಿಸಿದ್ದಾರೆ. ಇದೇ ರೀತಿ ಮುಂದುವರೆದರೆ ವಾಹನ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕುಡುಕರಿಗೆ ಪೊಲೀಸರು ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ.