ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ತಾಯಿಯೇ ಮಗು ಎಸೆದು ಕೊಂದ ಪ್ರಕರಣ: ಪೊಲೀಸ್​​ ಚಾರ್ಜ್​​ಶೀಟ್​ನಲ್ಲಿ ಏನಿದೆ? - ಈಟಿವಿ ಭಾರತ ಕನ್ನಡ

ಬೆಂಗಳೂರಿನಲ್ಲಿ ನಾಲ್ಕನೇ‌ ಮಹಡಿಯಿಂದ ತಾಯಿಯೇ ಮಗು ಬಿಸಾಡಿ ಕೊಂದ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

police-charge-sheet-in-case-of-mother-throwing-child-to-death
ಬೆಂಗಳೂರಲ್ಲಿ ತಾಯಿಯೇ ಮಗು ಎಸೆದು ಕೊಂದ ಪ್ರಕರಣ: ಪೊಲೀಸ್​​ ಚಾರ್ಜ್​​ಶೀಟ್​ನಲ್ಲಿ ಏನಿದೆ?

By

Published : Nov 7, 2022, 6:17 PM IST

ಬೆಂಗಳೂರು:ನಗರದಲ್ಲಿ ಕಳೆದ‌ ಮೂರು ತಿಂಗಳ ಹಿಂದೆ ನಡೆದ ತಾಯಿಯೇ ಮಗುವನ್ನು ನಾಲ್ಕನೇ‌ ಮಹಡಿಯಿಂದ ಬಿಸಾಡಿ ಕೊಂದ ಪ್ರಕರಣ ಸಂಬಂಧ ಸಂಪಂಗಿರಾಮನಗರ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಕಳೆದ ಆಗಸ್ಟ್ 4ರಂದು‌ ಮಹಿಳೆಯು ಮಗುವನ್ನು ಕಟ್ಟಡದಿಂದ ಕೆಳಗೆ ಎಸೆದಿದ್ದರು.

ಪೊಲೀಸರು 193 ಪುಟಗಳ ಚಾರ್ಜ್​ಶೀಟ್​​ ಸಲ್ಲಿಸಿದ್ದು, ಮಗುವನ್ನು ಬಿಸಾಡಿದ್ದನ್ನು ಪ್ರತ್ಯಕ್ಷವಾಗಿ ಕಂಡಿದ್ದ ಮೂವರು ಐ ವಿಟ್ನೆಸ್ ಹೇಳಿಕೆ ದಾಖಲು ಮಾಡಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಬರೋಬ್ಬರಿ 34 ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದಾರೆ. ಮಗುವಿನ ಕಾಯಿಲೆ ಬಗ್ಗೆಯೂ ಉಲ್ಲೇಖ ಮಾಡಿದ್ದು, ಅದು ವಿಶೇಷಚೇತನ ಮಗುವಲ್ಲ, AUTISM ಎಂಬ ಕಾಯಿಲೆಯಿಂದ ಮಗು ಬಳಲುತ್ತಿತ್ತು. ಪ್ರತಿನಿತ್ಯ ಥೆರಫಿ ಮಾಡಿಸಲು ಮಗುವನ್ನು ಕರೆದೊಯ್ಯುತ್ತಿದ್ದ ತಾಯಿ ಸುಷ್ಮಾ, ಇದರಿಂದ ಬೇಸತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.

ಮಗುವನ್ನು ಪ್ರತಿದಿನ ಆಸ್ಪತ್ರೆಗೆ ಕರೆದೊಯ್ಯಬೇಕಲ್ಲ ಎಂದು ಬೇಸತ್ತು, ತನ್ನಿಂದ ನೋಡಿಕೊಳ್ಳಲಾಗುವುದಿಲ್ಲ. ತನ್ನ ಜೀವನದಲ್ಲಿ ಖುಷಿಯಿಂದ ಇರಲೂ ಆಗುವುದಿಲ್ಲ ಎಂದು ನಿರ್ಧರಿಸಿ ಎರಡು ಬಾರಿ ಮಗು ಬಿಸಾಡಲು ಹೊರಗಡೆ ಬಂದು ನೋಡಿ, ಕೃತ್ಯಕ್ಕೆ ಅಡ್ಡಲಾಗಿದ್ದ ಮರವನ್ನು ಗಮನಿಸಿದ್ದರು. ಆ ಬಳಿಕ ಸ್ವಲ್ಪ ದೂರದಲ್ಲಿ ಕಲ್ಲಿನಿಂದ ಕೂಡಿದ್ದ ಗಟ್ಟಿ ನೆಲವನ್ನು ನೋಡಿ ಎಸೆದಿರುವುದಾಗಿ ತನಿಖೆಯಲ್ಲಿ ಗೊತ್ತಾಗಿದೆ.

ಅಲ್ಲದೆ, ಎಲ್ಲಿಯಾದರೂ ಕಾರ್ಯಕ್ರಮಗಳಿಗೆ ಹೋದಾಗ ಮಗುವನ್ನು ನೋಡಿ ಸಂಬಂಧಿಕರ ಕೊಂಕಿನ ಮಾತಿಂದ ಸುಷ್ಮಾ ಬೇಸರಗೊಂಡಿದ್ದರಂತೆ. ಲೈಫ್​ ಎಂಜಾಯ್​ ಮಾಡಲು ಸುಷ್ಮಾಗೆ ಮಗುವಿನ ಆರೈಕೆಯೇ ಕಷ್ಟವಾಗಿತ್ತು. ಹೀಗಾಗಿ ಕೊಲೆ ಮಾಡಿದ್ದಾರೆ. ಅಲ್ಲದೆ, ತಾಯಿಗೆ ಮಾನಸಿಕ ಸಮಸ್ಯೆ ಇಲ್ಲ. ಆರೋಗ್ಯದ ಸ್ಥಿತಿ ಚೆನ್ನಾಗಿದೆ ಎಂಬುದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿನ ತಪಾಸಣೆ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ:ಚಿನ್ನ ಖರೀದಿ ನೆಪದಲ್ಲಿ ಒಡವೆ ಕದಿಯುತ್ತಿದ್ದ ಕಳ್ಳಿಯ ಬಂಧನ...

ABOUT THE AUTHOR

...view details