ಬೆಂಗಳೂರು : ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಬೃಹತ್ ಗಣೇಶ ನಿಮಜ್ಜನ ಕಾರ್ಯಕ್ರಮ ಹಾಗೂ ಅದ್ದೂರಿ ಮೆರವಣಿಗೆ ಆರಂಭವಾಗಿದೆ.
ಚಾಮರಾಜಪೇಟೆ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿದ ಹಿನ್ನೆಲೆ, ಹಿಂದೂ ಸಂಘಟನೆಗಳು, ಗಣೇಶೋತ್ಸವ ಸಮಿತಿ ಮೈದಾನದ ಎದುರಿನ 2ನೇ ಮುಖ್ಯರಸ್ತೆಯಲ್ಲಿನ ಅಯ್ಯಪ್ಪ ದೇಗುಲ ಬಳಿ ಗಣಪತಿ ಪ್ರತಿಷ್ಠಾಪನೆ ಮಾಡಿತ್ತು. ಇಂದು ಅದ್ದೂರಿ ಮೆರವಣಿಗೆ ಮೂಲಕ ಗಣೇಶನ ನಿಮಜ್ಜನ ಮಾಡಲು ಸಮಿತಿ ನಿರ್ಧರಿಸಿತ್ತು. ಇಂದು ಪಾದರಾಯನಪುರದಿಂದ ಮೆರವಣಿಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಚಾಮರಾಜಪೇಟೆಯ ಗಣೇಶೋತ್ಸವ ಅದ್ದೂರಿ ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಳೆದ 7 ದಿನಗಳಿಂದ ಪೂಜೆ ಪುನಸ್ಕಾರ : ಕಳೆದ 7 ದಿನಗಳಿಂದ ಇಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಇಂದು ಇಲ್ಲಿನ ಮುಖ್ಯ ಬೀದಿಗಳಲ್ಲಿ ಗಣೇಶ ನಿಮಜ್ಜನ ಮೆರವಣಿಗೆ ನಡೆದ ನಂತರ ಚಾಮರಾಜಪೇಟೆಯ ಗಣೇಶನ ಮೂರ್ತಿಗಳು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಸೇರಲಿವೆ. ಅಲ್ಲದೇ ಬಿನ್ನಿಪೇಟೆಯ ಮೂರ್ತಿಗಳು ಮೈಸೂರು ಸರ್ಕಲ್ಗೆ ಬಂದು ಸೇರಲಿದ್ದು, ಅಲ್ಲಿಂದ ಒಟ್ಟಾಗಿ ಟೌನ್ ಹಾಲ್ ಮುಂದೆ ಬೃಹತ್ ನಿಮಜ್ಜನ ಮೆರವಣಿಗೆ ಸಾಗಲಿದೆ.
ಇದನ್ನೂ ಓದಿ :ಪೂಜೆ ಮಾಡಿಸುವ ನೆಪದಲ್ಲಿ ದೇವಿಯ ಚಿನ್ನದ ತಾಳಿ ಕದಿಯುತ್ತಿದ್ದ ಆರೋಪಿ ಅರೆಸ್ಟ್