ಬೆಂಗಳೂರು: ವಿದೇಶಿ ಮಹಿಳೆಯರು ನಡೆಸುತ್ತಿದ್ದ ಮಾಂಸ ದಂಧೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಮಾಂಸ ದಂಧೆ ಅಡ್ಡೆ ಮೇಲೆ ಪೊಲೀಸರ ದಾಳಿ : 9 ವಿದೇಶಿ ಮಹಿಳೆಯರ ಬಂಧನ - Prostitution in Bangalore
ಬೆಂಗಳೂರಿನಲ್ಲಿ ಮಾಂಸ ದಂಧೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, 9 ವಿದೇಶಿ ಮಹಿಳೆಯರನ್ನು ಬಂಧಿಸಿದ್ದಾರೆ.
ಬೆಂಗಳೂರು ವೇಶ್ಯಾವಾಟಿಕೆ ಪ್ರಕರಣಗಳು
ರಾತ್ರಿ ವೇಳೆ ರಸ್ತೆ ಬದಿಗಳಲ್ಲಿ ನಿಂತು ರಸ್ತೆಯಲ್ಲಿ ಪುರುಷರಿಗೆ ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೂರ್ವ ವಿಭಾಗದ ಹೆಣ್ಣೂರು ಮತ್ತು ಬಾಣಸವಾಡಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ 9 ವಿದೇಶಿ ಮಹಿಳೆಯರನ್ನ ಬಂಧಿಸಿದ್ದಾರೆ.
ವಿದೇಶಿ ಮಹಿಳೆಯರು ಯಾವುದೇ ಅಧಿಕೃತ ವೀಸಾ ಮತ್ತು ಪಾಸ್ಪೋರ್ಟ್ ಹೊಂದದೆ ಅನಧಿಕೃತವಾಗಿ ವಾಸ ಮಾಡುತ್ತಿದ್ದರು. 9 ವಿದೇಶಿ ಮಹಿಳೆಯರನ್ನ ಬಂಧಿಸಿ 5 ಪ್ರಕರಣಗಳಡಿ ಕೇಸ್ ದಾಖಲಿಸಲಾಗಿದೆ.