ಕರ್ನಾಟಕ

karnataka

ETV Bharat / state

ಪಾರ್ಟಿ ಮೇಲೆ ಪೊಲೀಸ್​ ದಾಳಿ: ದಿಕ್ಕಾಪಾಲಾಗಿ ಓಡಿದ ಆಫ್ರಿಕನ್‌ ಪ್ರಜೆಗಳು - Hennur police attacked

ಅನುಮತಿಯಿಲ್ಲದೆ ಪಾರ್ಟಿ ನಡೆಸುತ್ತಿದ್ದ ಆಫ್ರಿಕನ್ ಪ್ರಜೆಗಳ ಮೇಲೆ‌ ಹೆಣ್ಣೂರು ಪೊಲೀಸರು ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ದಾಳೆ ವೇಳೆ ಬಂಧನ ಭೀತಿಯಿಂದ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ.

ಪ್ರಮುಖ ಆರೋಪಿ ಜಾನ್ಸನ್
ಪ್ರಮುಖ ಆರೋಪಿ ಜಾನ್ಸನ್

By

Published : Sep 6, 2020, 6:26 PM IST

Updated : Sep 6, 2020, 7:26 PM IST

ಬೆಂಗಳೂರು: ಒಂದೆಡೆ ಸ್ಯಾಂಡಲ್​ವುಡ್ ಡ್ರಗ್ಸ್ ದಂಧೆ ಪ್ರಕರಣದ ತನಿಖೆಯನ್ನು ಸಿಸಿಬಿ ನಡೆಸುತ್ತಿದ್ದರೆ, ಇನ್ನೊಂದೆಡೆ ಅನುಮತಿಯಿಲ್ಲದೆ ಪಾರ್ಟಿ ನಡೆಸುತ್ತಿದ್ದ ಆಫ್ರಿಕನ್ ಪ್ರಜೆಗಳ ಮೇಲೆ‌ ಹೆಣ್ಣೂರು ಪೊಲೀಸರು ದಾಳಿ ನಡೆಸಿದ್ದಾರೆ.

ಆಫ್ರಿಕನ್‌ ಪ್ರಜೆಗಳ ಪಾರ್ಟಿ ಮೇಲೆ ಪೊಲೀಸ್​ ದಾಳಿ

ನಿನ್ನೆ ರಾತ್ರಿ ಹೊರಮಾವು ಬಳಿಯ‌ ಆಫ್ರಿಕನ್ ಕಿಚನ್​​ನಲ್ಲಿ ನೂರಾರು ಆಫ್ರಿಕನ್‌ ಪ್ರಜೆಗಳು ಪಾರ್ಟಿ ಮಾಡುತ್ತಿದ್ದರು. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಪೊಲೀಸ್ ಅನುಮತಿ‌ ಪಡೆಯದೆ ಪಾರ್ಟಿ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಜಾನ್ಸನ್ ಎಂಬಾತನನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಜಾನ್ಸನ್

ಹೊರಮಾವು ಬಳಿ ಆಫ್ರಿಕನ್ ಪ್ರಜೆಗಳು ನಡೆಸುತ್ತಿದ್ದ ಪಾರ್ಟಿ ಮೇಲೆ ದಾಳಿ ನಡೆಸುತ್ತಿದ್ದಂತೆ, ಬಂಧನ ಭೀತಿಯಿಂದ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಹೆಣ್ಣೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Last Updated : Sep 6, 2020, 7:26 PM IST

ABOUT THE AUTHOR

...view details