ಕರ್ನಾಟಕ

karnataka

ETV Bharat / state

ನಕಲಿ ನಂದಿನಿ ತುಪ್ಪದ ಅಡ್ಡೆ ಮೇಲೆ ಪೊಲೀಸರ ದಾಳಿ, ರಾಜಸ್ಥಾನ ಮೂಲದ ವ್ಯಕ್ತಿ ಬಂಧನ.. - Police attack on fake Nandhini ghee shop in Nelamangala

ಬೆಂಗಳೂರು ಉತ್ತರ ತಾಲೂಕಿನ ಬೈಯಂಡಳ್ಳಿ ಬಳಿ ತುಪ್ಪ ತಯಾರಿಕ ಘಟಕದಲ್ಲಿ ನಕಲಿ ನಂದಿನಿ ತಯಾರಿಸಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ.

police-attack-on-fake-nandhini-ghee-shop-in-nelamangala
ನಕಲಿ ನಂದಿನಿ ತುಪ್ಪದ ಅಡ್ಡೆ ಮೇಲೆ ಪೊಲೀಸರ ದಾಳಿ

By

Published : Feb 17, 2022, 5:16 PM IST

ನೆಲಮಂಗಲ: ನಕಲಿ ನಂದಿನಿ ತುಪ್ಪದ ಅಡ್ಡೆ ಮೇಲೆ ಕೆಎಂಎಫ್ ಅಧಿಕಾರಿಗಳ ನೇತೃತ್ವದಲ್ಲಿ ಮಾದನಾಯಕನಹಳ್ಳಿ ಪೊಲೀಸರು ದಾಳಿ ನಡೆಸಿ ರಾಜಸ್ಥಾನ ಮೂಲದ ವ್ಯಕ್ತಿಯನ್ನ ಬಂಧಿಸಿದ್ದಾರೆ.

ನಕಲಿ ನಂದಿನಿ ತುಪ್ಪದ ಅಡ್ಡೆ ಮೇಲೆ ಪೊಲೀಸರ ದಾಳಿ

ಬೆಂಗಳೂರು ಉತ್ತರ ತಾಲೂಕಿನ ಬೈಯಂಡಳ್ಳಿ ಬಳಿ ತುಪ್ಪ ತಯಾರಿಕ ಘಟಕದಲ್ಲಿ ನಕಲಿ ನಂದಿನಿ ತಯಾರಿಸಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ.

ಕೆಎಂಎಫ್ ಜಾಗೃತ ದಳದ ಅಶೋಕ್, ಜಯರಾಮ್, ಸುರೇಶ್ ತಂಡದೊಂದಿಗೆ ನೆಲಮಂಗಲ ಉಪ ವಿಭಾಗದ ಡಿವೈಎಸ್​ಪಿ ಗೌತಮ್, ಮಾದನಾಯಕನಹಳ್ಳಿ ಸಿಪಿಐ ಮಂಜುನಾಥ್ ದಾಳಿಯ ನೇತೃತ್ವ ವಹಿಸಿದ್ದರು. ನಕಲಿ ನಂದಿನಿ ತುಪ್ಪದ ಆರೋಪಿ ರಾಜಸ್ಥಾನ ಮೂಲದ ಬಾಬು ಲಾಲ್ (40) ಬಂಧಿಸಲಾಗಿದೆ. 15 ಲಕ್ಷಕ್ಕೂ ಹೆಚ್ಚು ವಸ್ತುಗಳನ್ನ ಜಪ್ತಿ ಮಾಡಲಾಗಿದೆ.

ನಕಲಿ ನಂದಿನಿ ಪ್ಯಾಕೇಟ್​

ರಾಜಸ್ಥಾನದ ಪಾಲಿ ಜಿಲ್ಲೆಯ ಬಾಬುಲಾಲ್ ಈ ಹಿಂದೆ ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ವ್ಯಾಪಾರದಲ್ಲಿ ನಷ್ಟ ಆಗಿದ್ದರಿಂದ ಕಲಬೆರಕೆ ತುಪ್ಪ ತಯಾರಿಸಲು ಮುಂದಾಗಿದ್ದ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಹಿಜಾಬ್ ವಿವಾದ: ಕೈ ಮುಸ್ಲಿಂ ಶಾಸಕರ ಜೊತೆ ಶಿಕ್ಷಣ ಸಚಿವ ನಾಗೇಶ್ ಸೌಹಾರ್ದದ ಸಭೆ; ಮನವಿ ಪತ್ರ ಸಲ್ಲಿಕೆ

For All Latest Updates

TAGGED:

ABOUT THE AUTHOR

...view details