ಬೆಂಗಳೂರು :ಸಿಲಿಕಾನ್ ಸಿಟಿಯ ಇಂದಿರಾನಗರದಲ್ಲಿನ ಅಕ್ರಮ ಕ್ಯಾಸಿನೋ ಮೇಲೆ ದಾಳಿ ನಡೆಸಿರುವ ಪೊಲೀಸರು 27 ಜನರನ್ನು ಬಂಧಿಸಿ, ಮೂರು ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ.
ಇಂದಿರಾನಗರದಲ್ಲಿ ಶ್ರೀನಿವಾಸ್ ಅಲಿಯಾಸ್ ಮೆಂಟಲ್ ಸೀನ, ಚಲಘಟ್ಟ ಚಂದ್ರ, ಮಲಯಾಳಿ ಮುರಳಿ ಎನ್ನುವವರ ಪಾಲುದಾರಿಕೆಯಲ್ಲಿ ಆಗಸ್ಟ್ 5ರಂದು ಕ್ಯಾಸಿನೋ ಶುರುವಾಗಿತ್ತು. ರೋಲೆಟ್, ಅಂದರ್ ಬಾಹರ್, ಎಲೆಕ್ಟ್ರಾನಿಕ್ ಪೋಕರ್, ಪಿನ್ ಬಾಲ್ ಸೇರಿದಂತೆ ಹಲವು ರೀತಿಯ ಕಾನೂನು ಬಾಹಿರ ಜೂಜು ಇಲ್ಲಿ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಮೇರೆಗೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ನೇತೃತ್ವದ ತಂಡವು ದಾಳಿ ನಡೆಸಿದೆ.