ಕರ್ನಾಟಕ

karnataka

ETV Bharat / state

ಪೊಲೀಸ್‌ ನೇಮಕಾತಿ ವಯೋಮಿತಿ ಹೆಚ್ಚಳ: ಆಕಾಂಕ್ಷಿಗಳಿಂದ ಗೃಹ ಸಚಿವರಿಗೆ ಸನ್ಮಾನ - police aspirants news

ಬೆಂಗಳೂರು ಪೊಲೀಸ್ ಹುದ್ದೆ ಆಕಾಂಕ್ಷಿತ ಅಭ್ಯರ್ಥಿಗಳು, ಶಾಸಕ ಎನ್‌. ರವಿಕುಮಾರ್‌ ನೇತೃತ್ವದಲ್ಲಿ ಗೃಹ ಸಚಿವರಿಗೆ ಶಾಲು ಹೊದಿಸಿ ಧನ್ಯವಾದ ತಿಳಿಸಿದರು.

home minister
ಪೊಲೀಸ್​ ಆಕಾಂಕ್ಷಿತರಿಂದ ಸಚಿವರಿಗೆ ಸನ್ಮಾನ

By

Published : May 29, 2020, 3:25 PM IST

ಬೆಂಗಳೂರು: ಪೊಲೀಸ್‌ ನೇಮಕಾತಿಗೆ ನಿಗದಿಪಡಿಸಲಾಗಿದ್ದ ವಯೋಮಿತಿಯನ್ನು ಸಡಿಲಿಸುವ ನಿರ್ಧಾರಕ್ಕೆ ಕಾರಣೀಭೂತರಾದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಪೊಲೀಸ್ ಹುದ್ದೆಯ ಆಕಾಂಕ್ಷಿಗಳು ಸನ್ಮಾನಿಸಿದರು.

ಬೆಂಗಳೂರಿನ ನಿವಾಸದಲ್ಲಿ ಶಾಸಕ ಎನ್‌. ರವಿಕುಮಾರ್‌ ನೇತೃತ್ವದಲ್ಲಿ ಯುವಕರ ತಂಡ ಸಚಿವರಿಗೆ ಶಾಲು ಹೊದಿಸಿ ಧನ್ಯವಾದ ತಿಳಿಸಿದರು. ಇದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಪಿಎಸ್‌ಐ ನೇಮಕಾತಿಗೆ ಜನರಲ್‌ ಕೆಟಗರಿ ಅಭ್ಯರ್ಥಿಗಳ ವಯೋಮಿತಿಯನ್ನು 28 ರಿಂದ 30 ಮತ್ತು ಓಬಿಸಿ ಅಭ್ಯರ್ಥಿಗಳ ವಯೋಮಿತಿಯನ್ನು 30 ರಿಂದ 32 ಕ್ಕೆ ಹೆಚ್ಚಿಸಿರುವುದಕ್ಕೆ ಪೊಲೀಸ್‌ ನೇಮಕಾತಿ ಅಭ್ಯರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ನೇಮಕಾತಿ ವಯೋಮಿತಿ ಹೆಚ್ಚಿಸಿರುವುದರಿಂದ ರಾಜ್ಯದಲ್ಲಿರುವ ಲಕ್ಷಾಂತರ ಜನ ಯುವಕರಿಗೆ ಲಾಭವಾಗಲಿದೆ ಎಂದು ಶಾಸಕ ರವಿಕುಮಾರ್‌ ಹೇಳಿದರು.

ಆದ್ರೆ ಈ ವಯೋಮಿತಿ ಸಡಿಲಿಕೆ ಮುಂದಿನ ಒಂದು ಅವಧಿಯ ನೇಮಕಾತಿಗೆ ಮಾತ್ರ ಅನ್ವಯಿಸಲಿದೆ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.

ABOUT THE AUTHOR

...view details