ಕರ್ನಾಟಕ

karnataka

ETV Bharat / state

10 ಗಂಟೆಯ ಬಳಿಕವೂ ಬಾರ್ ಓಪನ್ ಮಾಡಿ ಅಕ್ರಮ ಮದ್ಯ ಮಾರಾಟ: ಮೂವರ ಬಂಧನ - ಅಕ್ರಮ ಮದ್ಯ ಮಾರಾಟ

ಕಟ್​ಡೌನ್ ಸಮಯದ ನಂತರವೂ ಬಾರ್ ಓಪನ್ ಮಾಡಿ ಡಬಲ್ ರೇಟ್​ಗೆ ಮದ್ಯ ಅಕ್ರಮವಾಗಿ ಮಾರುತ್ತಿರುದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

police arrests people who sold liquor during lockdwon for double rate
police arrests people who sold liquor during lockdwon for double rate

By

Published : May 29, 2021, 4:38 PM IST

ಬೆಂಗಳೂರು: ಹತ್ತು ಗಂಟೆಯ ನಂತರ ಅತ್ಯಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಸೇವೆಗೂ ನಿಷೇಧ ಇದ್ದರೂ ಕಟ್​ಡೌನ್ ಸಮಯದ ನಂತರ ಬಾರ್ ಓಪನ್ ಮಾಡಿ ಡಬಲ್ ರೇಟ್​ಗೆ ಮದ್ಯ ಅಕ್ರಮವಾಗಿ ಮಾರುತ್ತಿರುವವರನ್ನು ರಾಜಧಾನಿಯ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಲಾಕ್​​ಡೌನ್​ನಲ್ಲಿ ಬಾರ್ ಓಪನ್ ಮಾಡಿ ದುಪ್ಪಟ್ಟು ಬೆಲೆಗೆ ಮಾರುತ್ತಿದ್ದ ಮೂವರ ಬಂಧನ

ಹತ್ತು ಸಾವಿರ ರೂ. ಮೌಲ್ಯದ ಮದ್ಯವನ್ನ 23 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ ನಗದು ಹಣ ಜಪ್ತಿ ಮಾಡಿ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಶಿವಲಿಂಗ್ ಅಲಿಯಾಸ್ ಸಣ್ಣಯ್ಯ (31), ಮನು ಅಲಿಯಾಸ್ ಪುಟ್ಟಸ್ವಾಮಿ (25), ಭಾಸ್ಕರ್ ಅಲಿಯಾಸ್ ಬಸವರಾಜು (28) ಬಂಧಿತ ಆರೋಪಿಗಳಾಗಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details